ಬೆಂಗಳೂರು : ವಾವ್.. ತನ್ನದೇ ನೆಲದಲ್ಲಿ ಪಾಕಿಸ್ತಾನ ಸಂಹಾರ ಮಾಡಿದ ಲಂಕಾ. ಲಂಕಾ ವಿರುದ್ಧ ಗೆದ್ದು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ತೊಡೆ ತಟ್ಟುತ್ತೇವೆ ಎಂದು ಬೀಗುತ್ತಿದ್ದ ಪಾಕ್ ಪಕ್ಕೆಲುಬು ಮುರಿದಿದೆ.
ಹೌದು, ಏಷ್ಯಾಕಪ್ ಸೂಪರ್-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕ್ ವಿರುದ್ಧ ಶ್ರೀಲಂಕಾ 2 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಪಾಕಿಸ್ತಾನ ಮಳೆರಾಯನ ವರ ಪಡೆಯಲು ಮೊದಲು ಬ್ಯಾಟ್ ಬೀಸಿತು. 42 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಪಾಕ್ ಪರ ರಿಜ್ವಾನ್ ಅಜೇಯ 86*, ಅಬದುಲ್ಲಾ ಶಫೀಕ್ 52 ಹಾಗೂ ಇಫ್ತಿಯರ್ ಅಹಮದ್ 47 ರನ್ಗಳ ನೆರವಿನಿಂದ ಲಂಕಾಗೆ 253 ರನ್ಗಳ ಬಿಗ್ ಟಾರ್ಗೆಟ್ ಸೆಟ್ ಮಾಡಿತು. ಲಂಕಾ ಪರ ಪತಿರಣ 3 ಹಾಗೂ ಪ್ರಮೋದ್ ಮದುಶನ್ 2 ವಿಕೆಟ್ ಕಬಳಿಸಿದರು.
253 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ 42 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿ ಮುಟ್ಟಿತು. ಇದರೊಂದಿಗೆ ಅಂತಿಮ ಪಂದ್ಯವನ್ನು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕ್ ಜೊತೆ ಆಡುವ ಕನಸು ಕನಸಾಗಿಯೇ ಉಳಿಯಿತು. ಫೈನಲ್ನಲ್ಲಿ ಲಂಕಾ ಹಾಗೂ ಭಾರತದ ನಡುವೆ ಟ್ರೋಫಿಗಾಗಿ ಕಾಳಗ ನಡೆಯಲಿದೆ.