Sunday, January 19, 2025

ಇಂದು ಭಾರತ-ಬಾಂಗ್ಲಾ ಪಂದ್ಯ : ಈ ಪ್ರಮುಖ ಆಟಗಾರರಿಗೆ ವಿಶ್ರಾಂತಿ!

ಬೆಂಗಳೂರು : ಏಷ್ಯಾಕಪ್ ಸೂಪರ್-4 ಹಂತದಲ್ಲಿ ಇಂದು ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಪಂದ್ಯ ನಡೆಯಲಿದೆ.

ಇಂದಿನ ಪಂದ್ಯ ಎರಡೂ ತಂಡಗಳಿಗೂ ಔಪಚಾರಿಕ ಪಂದ್ಯವಾಗಿದೆ. ಈ ಪಂದ್ಯದ ಗೆಲುವು ಫೈನಲ್ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬ್ಲೂ ಬಾಯ್ಸ್​ಗೆ ಸೋಲುಣಿಸಿ ಗೆಲುವಿನೊಂದಿಗೆ ಟೂರ್ನಿಗೆ ಗುಡ್ ಬೈ ಹೇಳುವ ಬಯಕೆ ಬಾಗ್ಲಾ ಹುಲಿಗಳದ್ದು. ಇತ್ತ, ಬಾಗ್ಲಾ ಟೈಗರ್ಸ್ ಮಣಿಸಿ ಗೆಲುವಿನ ನಾಗಾಲೋಟ ಮುಂದುವರಿಸುವುದು​ ರೋಹಿತ್​ ಪಡೆ ಪ್ಲ್ಯಾನ್.

ಭಾರತ ಇಂದಿನ ಪಂದ್ಯದಲ್ಲಿ ಫೈನಲ್​ ದೃಷ್ಟಿಯಿಂದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಅವಕಾಶ ಸಿಗದ ಆಟಗಾರರನ್ನು ಕಣಕ್ಕಳಿಸುವ ಯೋಜನೆಯಲ್ಲಿದೆ. ಆರಂಭಿಕ ಆಟಗಾರ ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಸರ್ ಪಟೇಲ್​ಗೆ ವಿಶ್ರಾಂತಿ ನೀಡಿ, ಶ್ರೇಯಸ್​ ಐಯ್ಯರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಹಾಗೂ ಕನ್ನಡಿ ಪ್ರಸಿದ್ಧ್ ಕೃಷ್ಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಅಯ್ಯರ್ 100% ಫಿಟ್ ಆಗಿಲ್ಲ

ಇನ್ನೂ ಶ್ರೇಯಸ್​ ಅಯ್ಯರ್ 100% ಫಿಟ್ ಆಗಿಲ್ಲ ಎನ್ನಲಾಗಿದೆ. ಹೀಗಾಗಿ, ಬಾಂಗ್ಲಾ ವಿರುದ್ಧ ಅವರು ಆಡದಿರಬಹುದು. ಬೇರೆಯವರಿಗೆ ರೆಸ್ಟ್ ಕೊಟ್ಟು ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಯಾರಿಗಾದರೂ ಅವಕಾಶ ಸಿಗುತ್ತಾ ಎಂದು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES