Sunday, December 22, 2024

ಗಲ್ಲಿಗೇರಿಸಿದ್ರೂ ಗಣೇಶ ಪ್ರತಿಷ್ಠಾಪನೆ ಮಾಡ್ತಿವಿ : ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ : ಕಮೀಷನರ್ ಅಲ್ಲ.. ಅವರ ಅಪ್ಪ ಅಡ್ಡ ಬಂದ್ರೂ ನಾವು ಗಣಪತಿ‌ ಪ್ರತಿಷ್ಠಾಪನೆ ಮಾಡ್ತಿವಿ. ನ್ಯಾಯಾಲಯ ಗಲ್ಲಿಗೇರಿಸಿದ್ರೂ ಗಣೇಶೋತ್ಸವ ಮಾಡ್ತಿವಿ. ಇದು 100 ಕೋಟಿ ಹಿಂದೂಗಳಿಗೆ ಮಾಡಿದ ಅವಮಾನ. ಕಾಂಗ್ರೆಸ್​ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ರಾಮನ ಪರ ನಿಲ್ಲಲಿಲ್ಲ. ನಿರ್ಲಜ್ಜ ಕಾಂಗ್ರೆಸ್​ಗೆ ಧಿಕ್ಕಾರ. ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆಗಿದೆ. ಕರ್ನಾಟಕದಲ್ಲಿ ನಿಮ್ಮ ಸರ್ಕಾರ ಇದೆ. ಕಾಂಗ್ರೆಸ್ ನಿಲುವು ಸರಿ ಅಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಬಂದ ತಕ್ಷಣ ಕೆಲವರು ಬಾಲ ಅಲ್ಲಾಡಸ್ತಿದಾರೆ. ಯಾಕೆ ವಿರೋಧ ಮಾಡ್ತೀರಿ? ಸಂವಿಧಾನ, ಸುಪ್ರೀಂ ಕೋರ್ಟ್ ಗೆ ಬೆಲೆ ಇಲ್ವಾ? ಕಳೆದ ವರ್ಷ ಗಣೇಶ ಪ್ರತಿಷ್ಠಾಪನೆ ಆಗಿದೆ. ಹೋದ ವರ್ಷ ಯಾಕೆ ಬಾಲ ಬಿಚ್ಚಲಿಲ್ಲ? ನೀವು ಇವಾಗ ಗಲಭೆಗೆ ಕಾರಣ ಆಗ್ತೀದಿರಿ. ಇಡೀ ದೇಶದಲ್ಲಿ ಗಲಾಟೆ ಮಾಡಿದ್ದು, ಮುಸ್ಲಿಮರು ಹಾಗೂ ಕಾಂಗ್ರೆಸ್​ನವರು. ಶಾಂತಿಯುತವಾಗಿ ನಡೆಯುವ ಗಣೇಶೋತ್ಸವಕ್ಕೆ ಪ್ರಚೋದನೆ ಕೊಡ್ತೀದಿರಿ. ಸುಪ್ರೀಂ ಕೋರ್ಟ್ ಆದೇಶ ಇದ್ರು, ಯಾಕೆ ಕೋರ್ಟ್ ಗೆ ಹೋಗ್ತೀರಿ? ಛೇಡಿಸಿದರು.

ಇದು ಹೇಯ, ನಾಚಿಕೆ ತರುವ ಕೆಲಸ

ಅಖಂಡ ಭಜನೆಯ ‌ಮೂಲಕ ಪ್ರತಿಭಟನೆ ಆರಂಭವಾಗಿದೆ. ಇಲ್ಲಿ ಧರಣಿ ಕುಳಿತ ಎಲ್ಲ ಹಿಂದೂಗಳಿಗೆ ಶ್ರೀರಾಮಸೇನೆ ಬೆಂಬಲ ಇದೆ. ಇದು ಹೇಯ, ನಾಚಿಕೆ ತರುವ ಕೆಲಸ. ಈ ದೇಶದಲ್ಲಿ ಹಿಂದೂ ಸಮಾಜ ಪ್ರಥಮ ಪೂಜೆ ಗಣೇಶನಿಗೆ ಮಾಡ್ತಾರೆ. ಯಾವ ಧರ್ಮದವರು ಇವತ್ತು ವಿರೋಧ ಮಾಡ್ತಾರೆ. ಅವರು ಹುಟ್ಟು ಮುನ್ನವೇ ಗಣೇಶ ಹಬ್ಬ ಆಚರಣೆ ಆಗ್ತಿದೆ. ಸುಪ್ರೀಂ ಕೋರ್ಟ್ ಆದೇಶ ಇದ್ರೂ ವಿರೋಧ ಮಾಡ್ತಿರೋದು ಹಿಂದೂ ವಿರೋಧಿ ನೀತಿ ಎಂದು ಆಕ್ರೋಶಗೊಂಡರು.

ಆಯುಕ್ತರೇ ನಿಮಗೆ ತಲೆ ಇಲ್ವಾ?

ಪಾಲಿಕೆ ಆಯುಕ್ತರು ಬಿಜೆಪಿ ಸರ್ಕಾರ ಇದ್ದಾಗ ಒಂದು ರೀತಿ, ಕಾಂಗ್ರೆಸ್ ಸರ್ಕಾ ಇದ್ದಾಗ ಒಂದು ರೀತಿನಾ? ಪಾಲಿಕೆ ಆಯುಕ್ತರೇ ನಿಮಗೆ ತಲೆ ಇಲ್ವಾ? ನೀವು ರಾಜಕೀಯ ಪಕ್ಷದ ಪರ ಇರಬೇಡಿ, ಕಾನೂನು ಪ್ರಕಾರ ಕೆಲಸ ಮಾಡಿ. ಈ ಆಟ ನಡೆಯಲ್ಲ. ಕೋರ್ಟ್ ನಮಗೆ ನ್ಯಾಯ ಕೊಡುತ್ತೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES