Sunday, January 19, 2025

ಸೆ.20, 21ಕ್ಕೆ ಇನ್ನೊಂದು ಸೀರಿಸ್ ಇದೆ : ಡಿಕೆಶಿ ಹೊಸ ಬಾಂಬ್

ಬೆಂಗಳೂರು : ಸೆಪ್ಟಂಬರ್ 20, 21ಕ್ಕೆ ಇನ್ನೊಂದು ಸೀರಿಸ್ ಇದೆ. ನಾನು ಮಾತನಾಡಲ್ಲ, ಕೆಲಸದ ಮೂಲಕ ಉತ್ತರ ಕೊಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತಷ್ಟು ಆಪರೇಷನ್ ಹಸ್ತದ ಸುಳಿವು‌ ಕೊಟ್ಟರು. ಬೆಂಗಳೂರು ಭಾಗದಲ್ಲಿ ಕಾಂಗ್ರೆಸ್ ಸೇರ್ತಾರೆ ಅಂತ ಸುಳಿವು ಕೊಟ್ಟ ಡಿಕೆಶಿ, 20-21 ಒಂದು ಸೀರಿಸ್ ಇದೆ. ಅಲ್ಲಿ ಕೆಲವರಿಗೆ ಉತ್ತರ ಕೊಡಬೇಕಾಗಿದೆ. ಆಗ ಉತ್ತರ‌ಕೊಡ್ತೀನಿ ಎಂದು ಕುಟುಕಿದರು.

ಬಿಜೆಪಿ ಪರಿಸ್ಥಿತಿ ಏನಾಗಿದೆ ಅಂತ ನಿಮಗೇ ಗೊತ್ತು. ವಿರೋಧ ಪಕ್ಷದ ನಾಯಕ ಯಾರು ಅಂತ ಗೊತ್ತಿಲ್ಲ. ಈಗ ಜೆಡಿಎಸ್ ಜೊತೆ ‌ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಿಳಿಸಿದವರ ಜೊತೆ ಕುಮಾರಸ್ವಾಮಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜೆಡಿಎಸ್ ಶಾಸಕರು ಅಸಮಧಾನಗೊಂಡಿದ್ದಾರೆ. ಅವರ ಅನುಕೂಲಕ್ಕೆ ಜೆಡಿಎಸ್ ರಾಜಕೀಯ ಮಾಡುತ್ತಿದ್ದಾರೆ. ಅವರ ಅನುಕೂಲ ಅವರು‌ ನೋಡ್ತಾ ಇದ್ರೆ, ಅಲ್ಲಿ ಇದ್ದು ನೀವೇನೂ ಮಾಡ್ತೀರಿ. ನಿಮ್ಮ ‌ನಿರ್ಧಾರ ನೀವು ಮಾಡಿಕೊಳ್ಳಿ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಬಹಿರಂಗವಾಗಿಗೆ ಆಹ್ವಾನ ಕೊಟ್ಟರು.

RELATED ARTICLES

Related Articles

TRENDING ARTICLES