Tuesday, December 24, 2024

ಸೆ.19ರಂದು ಭೂಮಿಗೆ ವಿದಾಯ ಹೇಳಲಿರುವ ಆದಿತ್ಯ L1

ಬೆಂಗಳೂರು : ಆದಿತ್ಯ ಎಲ್​1 (Aditya-L1 Mission) ಬಗ್ಗೆ ಇಸ್ರೋ (ISRO) ವಿಜ್ಞಾನಿಗಳು ಬಿಗ್ ಅಪ್ಡೇಟ್​ ನೀಡಿದ್ದು, ಸೆ.19ರಂದು ಆದಿತ್ಯ ಎಲ್​1 ಭೂಮಿಗೆ (Earth) ವಿದಾಯ ಹೇಳಲಿದೆ.

ಸೂರ್ಯನ ಮೇಳಿನ ಸಂಶೋಧನೆಗಾಗಿ ಉಡಾವಣೆ ಮಾಡಲಾಗಿರುವ ಆದಿತ್ಯ ಎಲ್​1 ಭೂಮಿಯ ನಾಲ್ಕನೇ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಇಸ್ರೋ ಪ್ರಕಟಿಸಿದೆ.

ಈಗ ಆದಿತ್ಯ ಎಲ್​1 ಉಪಗ್ರಹವು 256 x 1,21,973 ಕಿ.ಮೀ ಕಕ್ಷೆಯನ್ನು ಪ್ರವೇಶಿಸಿದೆ. ಸೆಪ್ಟಂಬರ್ 19ರಂದು ಬೆಳಗಿನ ಜಾವ 2 ಗಂಟೆಗೆ ಆದಿತ್ಯ ಎಲ್​1 ಉಪಗ್ರಹವು ಮುಂದಿನ ಕಕ್ಷೆಯ ಉತ್ತೇಜನದೊಂದಿಗೆ ಭೂಮಿಗೆ ವಿದಾಯ ಹೇಳುತ್ತದೆ. ಅಲ್ಲದೆ, ಲ್ಯಾಗ್ರೇಜನ್ ಪಾಯಿಂಟ್ 1ರ ಕಡೆಗೆ ಪ್ರಯಾಣ ಬೆಳೆಸುತ್ತದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

RELATED ARTICLES

Related Articles

TRENDING ARTICLES