ಧಾರವಾಡ : ಇರೋ ಕಾನೂನು ನಿಮ್ಮ ತಲೆಗೆ ಹೋಗೋದಿಲ್ಲ ಅಂದ್ರೆ ಹೇಗೆ? ಎಂದು ಭೂ ದಾಖಲೆಗಳ ಸರ್ವೆ ಇಲಾಖೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತರಾಟೆ ತಗೆದುಕೊಂಡಿದ್ದರು.
ಧಾರವಾಡ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದಿರುವ ಸಭೆಯಲ್ಲಿ ಭಾಗಿಯಾಗಿದ್ದ ಸಚಿವ ಕೃಷ್ಣಭೈರೇಗೌಡ ರವರು ಪೋಡಿ ಸರ್ವೇಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವುದರಲ್ಲಿ ನಿರ್ಲಕ್ಷವನ್ನು ತೋರಿದ್ದರು.
ಇದನ್ನು ಓದಿ : ಆಟೋ, ಬೈಕ್ ನಡುವೆ ಡಿಕ್ಕಿ ; ಇಬ್ಬರಿಗೆ ಗಂಭೀರ ಗಾಯ
ಈ ವಿಚಾರದ ಹಿನ್ನೆಲೆ ಕೃಷ್ಣಭೈರೇಗೌಡ ಅವರು ಗರಂ ಆಗಿದ್ದು, ಈ ವೇಳೆ ಜನರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆಂದು ಅಧಿಕಾರಿ ಮೋಹನ ಶಿವಮ್ಮನವರಿಗೆ ಕ್ಲಾಸ ತೆಗೆದುಕೊಂಡಿದ್ದರು. ಸಚಿವರ ತರಾಟೆ ಬಳಿಕವೂ ಅಧಿಕಾರಿಯು ತಮ್ಮದೇ ಆದ ಸಮಜಾಯಿಸಿ ಹೇಳುತ್ತಿದ್ದರು. ಇದರಿಂದ ಮತ್ತೋಷ್ಟು ಗರಂ ಆದ ಸಚಿವರು ನಾ ಎಷ್ಟು ಹೇಳಿದ್ರೂ ನೀವು ಒಪ್ಪೋಲ್ಲ ಬಿಡಿ.
ನೀವು ನಮ್ಮ ಮಾತು ಕೇಳಲ್ಲ ಬಿಡಿ, ನಿವೇನು ಲಾರ್ಡ್ ಬೆಳಗ್ಗೆಯಿಂದ ಹೇಳುತ್ತಾನೆ ಇದ್ದೀನಿ ನಿಮಗೆ ಅರ್ಥವಾಗುತ್ತಿಲ್ಲವ. ಸರ್ವೇ ಇಲಾಖೆಯವರು ನಿಮ್ಮನ್ನ ನೀವು ಏನೆಂದು ಅಂದುಕೊಂಡಿದ್ದೀರಾ? ನಿಮ್ಮ ಮನಸ್ಥಿತಿ ಮೊದಲು ಬದಲಾಯಿಸಿಕೊಳ್ಳಿ. ಇರೋ ಕಾನೂನು ನಿಮ್ಮ ತಲೆಗೆ ಹೋಗೋದಿಲ್ಲ ಅಂದ್ರೆ ಹೇಗೆ?. ಎಲ್ಲ ಜನರು ಬಂದು ನಿಮ್ಮ ಮನೆ ಬಾಗಿಲು ಕಾಯಬೇಕಾ? ನೀವು ಹೇಳಿದ ಹಾಗೆ ಜಗತ್ತು ಕುಣಿಯಬೇಕಾ? ಅಧಿಕಾರಿಗಳಿಗೆ ಪ್ರಶ್ನಿಸುತ್ತಾ ತರಾಟೆಯನ್ನು ತೆಗೆದುಕೊಂಡ ಸಚಿವ ಕೃಷ್ಣಭೈರೇಗೌಡರವರು