ಬೆಂಗಳೂರು : ಎರಡು ತಿಂಗಳಿಂದ ಏರಿಕೆಯಾಗಿದ್ದ ತರಕಾರಿ ಬೆಲೆ ಕೊನೆಗೂ ಇಳಿಕೆಯಾಗಿದೆ. ಬಹುತೇಕ ತರಕಾರಿಗಳು ಸಾಮಾನ್ಯರ ಕೈಗೆಟ್ಟಕುವಂತಿದೆ.
ಕೊತ್ತಂಬರಿ, ಮೂಲಂಗಿ, ಬೀನ್ಸ್ ಬೆಲೆಯಲ್ಲಿ ಕೊಂಚ ಏರಿಕೆ ಇದ್ದು, ಉಳಿದ ತರಕಾರಿ ಬೆಲೆಗಳು ಇಳಿಕೆ ಕಂಡಿವೆ. ರೈತರಿಗೆ ಸರಿಯಾದ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಹಸಿರು ಮೆಣಸಿನಕಾಯಿ ಬೆಲೆ ಕೆಜಿಗೆ 50 ರೂ. ಇದ್ದು, ಅವರೆಕಾಯಿ ಕೆಜಿಗೆ 30 ರೂ. ಇದೆ. ಬದನೆಕಾಯಿ ಕೆಜಿಗೆ 30 ರೂಪಾಯಿ ಇದೆ. ಇನ್ನು ತೊಂಡೆಕಾಯಿ ಕೆಜಿಗೆ 20 ರೂ. ಆಗಿದ್ದು, ನುಗ್ಗೆಕಾಯಿ ಕೆಜಿಗೆ 30 ರೂಪಾಯಿಗೆ ಇಳಿದಿದೆ.
ಇಂದಿನ ತರಕಾರಿ ಬೆಲೆ
- ಟೊಮೆಟೋ :10 (1 ಬಾಕ್ಸ್ (12 ಕೆಜಿ) ಟೊಮೆಟೋ ಬೆಲೆ : 1೦೦)
- ಮೆಣಸಿನಕಾಯಿ : 50 ಕೆಜಿಗೆ
- ಹಿರೇಕಾಯಿ : 40 ಕೆಜಿಗೆ
- ಅವರೆಕಾಯಿ : 30 ಕೆಜಿಗೆ
- ಬದನೆಕಾಯಿ : 30 ಕೆಜಿಗೆ
- ಮೂಲಂಗಿ : 70 ಕೆಜಿಗೆ
- ಬಟಾಣಿ : 120 ಕೆಜಿಗೆ
- ಕ್ಯಾರೆಟ್ : 60 ಕೆಜಿಗೆ
- ಬೀನ್ಸ್ : 60 ಕೆಜಿಗೆ
- ಸೌತೆಕಾಯಿ : 20 ಕೆಜಿಗೆ
- ಈರುಳ್ಳಿ : 30 ಕೆಜಿಗೆ
- ಬೆಳ್ಳುಳ್ಳಿ :120 ಕೆಜಿಗೆ
- ತೊಗರಿಕಾಯಿ : 7೦ ಕೆಜಿಗೆ
- ತೊಂಡೆಕಾಯಿ : 2೦ ಕೆಜಿಗೆ
- ನುಗ್ಗೆಕಾಯಿ : 3೦ ಕೆಜಿಗೆ
- ನಿಂಬೆಹಣ್ಣು : 1ಕ್ಕೆ 5ರೂ
- ಕೊತ್ತಂಬರಿ : 30 (1 ಕಟ್ಟು)
ಕಾಳುಗಳ ಬೆಲೆ ಏರಿಕೆ ಶಾಕ್
ಒಂದು ಕಡೆ ತರಕಾರಿ ಬೆಲೆ ಇಳಿಕೆಯಾದರೆ, ಮತ್ತೊಂದು ಕಡೆ ಬೇಳೆ ಕಾಳು ಬೆಲೆ ಏರಿಕೆ ಕಂಡಿದೆ. ಬಹುತೇಕ ಎಲ್ಲಾ ಬೇಳೆ ಕಾಳುಗಳ ಮೇಲೆ 20 ರಿಂದ 30 ರೂ. ಹೆಚ್ಚಳವಾಗಿದೆ. ಬೇಳೆ ಕಾಳುಗಳ ಬೆಲೆ ನೋಡೋದಾದ್ರೆ..
ಹೆಸರು ಹಿಂದಿನ ದರ ಇಂದಿನ ದರ
- ತೊಗರಿ ಬೇಳೆ 130 170
- ಕಡಲೆ ಬೇರ್ 70 90
- ಉದ್ದಿನ ಬೇಳೆ 110 130
- ಹೆಸರು ಬೇಳೆ 110 120
- ಹೆಸರು ಕಾಳು 110 125
- ಕಡಲೆ ಕಾಳು 70 90
- ಅವರೆ ಕಾಳು 120 160
- ಅವರೆ ಬೇಳೆ 160 190
- ರಾಜಮ್ಮ 140 160
- ಧನಿಯಾ 160 18೦
- ಗೋಧಿ 35 40
- ಕಾಳು ಮೆಣಸು 600 760
- ಜೀರಿಗೆ 600 800
- ಸಾಸಿವೆ 100 120
- ಮೆಂತ್ಯಾ 100 120