Wednesday, November 20, 2024

INDIA ಮೈತ್ರಿ ಸನಾತನ ಧರ್ಮ ನಾಶ ಮಾಡಲು ಬಯಸುತ್ತಿದೆ : ಪ್ರಧಾನಿ ಮೋದಿ

ನವದೆಹಲಿ : I.N.D.I.A ಮೈತ್ರಿ ಒಕ್ಕೂಟ ಸನಾತನ ಧರ್ಮವನ್ನು ನಾಶ ಮಾಡಲು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಮಧ್ಯ ಪ್ರದೇಶದ ಬಿನಾ ನಗರದಲ್ಲಿ ನಡೆದ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿ ಕೂಟಕ್ಕೆ ನಾಯಕರೇ ಇಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಭಾರತದ ಸಂಸ್ಕೃತಿ ಮೇಲೆ ದಾಳಿ ನಡೆಸೋದೇ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿ ಕೂಟದ ಹಿಡನ್ ಅಜೆಂಡಾ. ಸನಾತನ ಧರ್ಮವನ್ನು ಮುಗಿಸಲು ಮೈತ್ರಿ ಕೂಟ ಬಯಸುತ್ತಿದೆ. ಇಂಡಿಯಾ ಮೈತ್ರಿ ಕೂಟವು ಸನಾತನ ಸಂಸ್ಕೃತಿಯನ್ನು ಮುಕ್ತಾಯಗೊಳಿಸುವ ನಿರ್ಣಯ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.

ಈ ದುರಹಂಕಾರದ ಮೈತ್ರಿಯು ಸನಾತನದ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಕೊನೆಗೊಳಿಸುವ ನಿರ್ಣಯದೊಂದಿಗೆ ಬಂದಿದೆ. ಈ I.N.D.I.A ಮೈತ್ರಿಯ ವ್ಯಕ್ತಿಗಳು ಭಾರತವನ್ನು 1,000 ವರ್ಷಗಳ ಕಾಲ ಗುಲಾಮಗಿರಿಗೆ ತಳ್ಳಲು ಬಯಸುತ್ತಾರೆ. ಆದರೆ, ನಾವು ಒಟ್ಟಾಗಿ ಅವರ ತಂತ್ರಗಳನ್ನು ವಿಫಲಗೊಳಿಸಬೇಕು ಎಂದು ಕುಟುಕಿದ್ದಾರೆ.

140 ಕೋಟಿ ಭಾರತೀಯರಿಗೆ ಯಶಸ್ಸು

ಜಿ-20ಯ ಯಶಸ್ಸಿನ ಶ್ರೇಯಸ್ಸು ನರೇಂದ್ರ ಮೋದಿಗೆ ಸಲ್ಲದೇ, ನಿಮ್ಮೆಲ್ಲರಿಗೂ ಸಲ್ಲುತ್ತದೆ. ಇದು ನಿಮ್ಮೆಲ್ಲರ ಸಾಮರ್ಥ್ಯ, ಇದು 140 ಕೋಟಿ ಭಾರತೀಯರ ಯಶಸ್ಸು. ಇದು ಭಾರತದ ಸಾಂಘಿಕ ಶಕ್ತಿಗೆ ಸಾಕ್ಷಿ. ಈ ಯಶಸ್ವಿ ಸಮಾರಂಭದಲ್ಲಿ ಭಾಗವಹಿಸಿದ ವಿದೇಶಿ ಅತಿಥಿಗಳು ಇಂದು ನಿಮ್ಮೆಲ್ಲರನ್ನು ಕೊಂಡಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES