Monday, December 23, 2024

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್.. ಇಂದು ಗೆದ್ದವರು ಫೈನಲ್​ಗೆ

ಬೆಂಗಳೂರು : ಏಷ್ಯಾಕಪ್ ಸೂಪರ್​-4 ಹಂತದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್​ ಗೆದ್ದಿರುವ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಮಳೆಯಿಂದಾಗಿ ಪಂದ್ಯ ಸಂಜೆ 5.15ಕ್ಕೆ ಆರಂಭವಾಯಿತು. ಪಂದ್ಯವನ್ನು 45-45 ಓವರ್​ಗಳವರೆಗೆ ನಡೆಸಲು ತೀರ್ಮಾನಿಸಲಾಯಿತು. ಇಂದಿನ ಪಂದ್ಯ ಲಂಕಾ ಹಾಗೂ ಪಾಕ್​ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವ ಸಾಧಿಸಿದ್ದ ಭಾರತ 4 ಅಂಕಗಳೊಂದಿಗೆ ಈಗಾಗಳೇ ಫೈನಲ್​ ತಲುಪಿದೆ. ಬಾಂಗ್ಲಾದೇಶ ವಿರುದ್ಧ ಗೆದ್ದ ಶ್ರೀಲಂಕಾ ಹಾಗೂ ಪಾಕಿಸ್ತಾನ ತಲಾ 2 ಅಂಕ ಪಡೆದಿವೆ. ಈ ತಂಡಗಳ ನಡುವೆ ಇಂದು ನಡೆಯುತ್ತಿರುವ ಪಂದ್ಯ ನಿರ್ಣಾಯಕ.

ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಫೈನಲ್​ನಲ್ಲಿ ಸಾಂಪ್ರದಾಯಿಕ ಎದುರಾಳಿಗಳೇ ಮತ್ತೆ ಮುಖಾಮುಖಿ ಆಗಲಿದ್ದಾರೆ. ಒಂದು ವೇಳೆ ಮಳೆ ಅಡ್ಡಿಪಡಿಸಿದರೆ ಉತ್ತಮ ರನ್ ರೇಟ್​ ಹೊಂದಿರುವ ಶ್ರೀಲಂಕಾ ಪೈನಲ್​ಗೆ ಲಗ್ಗೆ ಇಡಲಿದೆ.

ಪಾಕಿಸ್ತಾನ ತಂಡ

ಫಖರ್ ಝಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಝಮಾನ್ ಖಾನ್

ಶ್ರೀಲಂಕಾ ತಂಡ

ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಪತಿರಾಣ

RELATED ARTICLES

Related Articles

TRENDING ARTICLES