Thursday, December 19, 2024

ಸೋಮವಾರದಿಂದ ಸಂಸತ್ ಅಧಿವೇಶನ!

ದೆಹಲಿ: ಸೋಮವಾರದಿಂದ ಸಂಸತ್ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಅಧಿವೇಶನಕ್ಕೂ ಮೊದಲು ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುವಂತೆ ವಿಪಕ್ಷಗಳಿಗೆ ಕರೆ ನೀಡಿದ್ದಾರೆ.

ಸೆ.18 ರಿಂದ 22 ವರೆಗೆ 5 ದಿನಗಳು ವಿಶೇಷ ಅಧಿವೇಶನ ನಡೆಯಲಿದೆ. ಇಂಡಿಯಾ ಮೈತ್ರಿಕೂಟದಲ್ಲಿರುವ 24 ಪಕ್ಷಗಳು ಸಂಸತ್ ನ ವಿಶೇಷ ಅಧಿವೇಶನದಲ್ಲಿ ಭಾಗಿಯಾಗುವುದಕ್ಕೆ ಒಪ್ಪಿದ್ದು, ಅಧಿವೇಶನದ ಕಾರ್ಯಸೂಚಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

ಇದನ್ನೂ ಓದಿ: ಜಿ20 ಶೃಂಗಸಭೆ ಯಶಸ್ವಿಗೆ ‘ನಮೋ’ಗೆ ಅಭಿನಂದನೆ

ಕಳೆದ ತಿಂಗಳು ಮುಕ್ತಾಯಗೊಂಡ ಮುಂಗಾರು ಅಧಿವೇಶನ ಹಳೆಯ ಸಂಸತ್ ಭವನದಲ್ಲಿ ನಡೆದಿತ್ತು. ಈ ಅಧಿವೇಶನ ಹಳೆಯ ಮತ್ತು ಹೊಸ ಸಂಸತ್ ಭವನಗಳಲ್ಲಿ ನಡೆಯುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ವರ್ಷಾಂತ್ಯಕ್ಕೆ ಪಂಚರಾಜ್ಯಗಳ ಚುನಾವಣೆಗಳಿಗೆ ತಯಾರಾಗುತ್ತಿರುವ ಪಕ್ಷಗಳಿಗೆ ವಿಶೇಷ ಅಧಿವೇಶನ ಕರೆದಿರುವುದು ಅಚ್ಚರಿ ಮೂಡಿಸಿದೆ.

RELATED ARTICLES

Related Articles

TRENDING ARTICLES