Wednesday, January 22, 2025

‘ಕೊತ್ವಾಲ್ ಶಿಷ್ಯ’ನಿಗೆ ನನ್ನ ಮಾತು ಎಲ್ಲಿ ಅರ್ಥ ಆಗಬೇಕು : ಶಾಸಕ ಯತ್ನಾಳ್

ವಿಜಯಪುರ : ವಂಚನೆ ಹಾಗೂ ಜಾತಿ ನಿಂದನೆ ಆರೋಪ ಹಿನ್ನೆಲೆ ಸಚಿವ ಡಿ. ಸುಧಾಕರ್‌ ವಿರುದ್ಧ ಎಫ್​ಐಆರ್ ದಾಖಲಾಗಿರುವ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಿಮ್ಮಂತಹ ರೌಡಿ, ಪುಡಾರಿ, ಕೊತ್ವಾಲ್ ಶಿಷ್ಯನ ಶಿಷ್ಯರಿಗೆ ನನ್ನ ಹೇಳಿಕೆ ಎಲ್ಲಿ ಅರ್ಥ ಆಗಬೇಕು ಅಲ್ಲವೇ? ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅರಿಗೆ ಟಾಂಗ್ ಕೊಟ್ಟಿದ್ದಾರೆ.

ನಿಮ್ಮದೇ ಸರ್ಕಾರ ರಾಜ್ಯದಲ್ಲಿ ಇರೋದು ಅಲ್ಲವೇ? ಮಾನ ಮರ್ಯಾದೆ ಇದ್ದರೇ ಕೂಲಂಕುಷವಾಗಿ ತನಿಖೆ ಮಾಡಿಸಿ. ನೀವು ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗಬೇಡಿ. ನಾನು ಹೇಳಿದ್ದು ಎಲ್ಲಾ ಪಕ್ಷದಲ್ಲೂ ದಲ್ಲಾಳಿಗಳು ಇರಬಹುದು ಅಂತ. ನನ್ನ ಹೇಳಿಕೆಯನ್ನು ತನಿಖೆ ಮಾಡಿಸಿ ಮೂರ್ಖರೇ ಎಂದು ಚಾಟಿ ಬೀಸಿದ್ದಾರೆ.

ಯತ್ನಾಳ್​ ಜೊತೆ ಚೈತ್ರಾ ಕುಂದಾಪುರ?

ಶಾಸಕ ಯತ್ನಾಳ್ ಜೊತೆ ಚೈತ್ರಾ ಕುಂದಾಪುರ ಇರುವ ಫೋಟೋವನ್ನು ಪೋಸ್ಟ್​ ಮಾಡಿ ಕಾಂಗ್ರೆಸ್​ ಟಾಂಗ್​ ಕೊಟ್ಟಿದೆ. ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2,500 ಕೋಟಿ ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ ಶಾಸಕ ಯತ್ನಾಳ್ ಅವರು ಬಿಜೆಪಿ ಟಿಕೆಟ್ ಗೆ 7 ಕೋಟಿ ಕೊಡಬೇಕು ಎಂದು ವಂಚಿಸಿದ ಆರೋಪಿಯೊಂದಿಗೆ ಎಂದು ಕುಟುಕಿದೆ.

ಕಳ್ಳರು, ಸುಳ್ಳರು, ವಂಚಕರು

ಸ್ಯಾಂಟ್ರೋ ರವಿಯೂ ಬಿಜೆಪಿಗರಿಗೆ ಆಪ್ತ, PSI ಹಗರಣದ ಆರೋಪಿಗಳೂ ಬಿಜೆಪಿಗರಿಗೆ ಆಪ್ತರು, ರೌಡಿ ಶೀಟರ್ ಗಳೂ ಬಿಜೆಪಿಗರಿಗೆ ಆಪ್ತರು, ಟಿಕೆಟ್ ಹಗರಣದ ವಂಚಕರೂ ಬಿಜೆಪಿಗರಿಗೆ ಆಪ್ತರು. ಕಳ್ಳರು, ಸುಳ್ಳರು, ವಂಚಕರು ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ?ಎಂದು ಪ್ರಶ್ನಿಸಿದೆ. ಇದಕ್ಕೆ ಯತ್ನಾಳ್ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES