ಬೆಂಗಳೂರು : SKY.. 360 ಹೊಡೆತಗಳಿಗೆ ಈತ ಹಂಟರ್. SKY ಘರ್ಜಿಸಿದರೆ ಭಾರತಕ್ಕೆ ಗೆಲುವು ಫಿಕ್ಸ್ ಅಂತಾನೇ ಅರ್ಥ. ಆ ಪರಿ ಇರುತ್ತೆ ಈ ಸೂರ್ಯ ಮೈದಾನದಲ್ಲಿ ಸ್ಫೋಟಿಸುತ್ತಾನೆ.
ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಬಳಿಕ 360 ಹೊಡೆತಗಳ ಆಟಗಾರ ಎಂಬ ಪ್ರಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ ಮೈದಾನದಲ್ಲಿ ಘರ್ಜಿಸುವ ಪರಿಗೆಮನಸೋಲದವರು ಯಾರೂ ಇಲ್ಲ. SKY ಆಟಕ್ಕೆ ರನ್ ಮೆಷಿನ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್ ಅಂಥ ಸ್ಟಾರ್ ಬ್ಯಾಟರ್ಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
SKY ಅಂತ ಕರೆದಿದ್ದು ಯಾರು?
ಸೂರ್ಯಕುಮಾರ್ ಯಾದವ್ರನ್ನು ಅಭಿಮಾನಿಗಳು SKY ಅಂತ ಕರೆಯುತ್ತಾರೆ. ಆದ್ರೆ, ಈ ಹೆಸರು ಮೊದಲು ಕರೆದಿದ್ದು ಯಾರು ಗೊತ್ತೇ? ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸೂರ್ಯ, ಗೌತಮ್ ಗಂಭೀರ್ ಅವರು ನನ್ನನ್ನು 2014ರಲ್ಲಿ SKY ಅಂತ ಕರೆದರು. ಅಂದಿನಿಂದ ಎಲ್ಲರೂ ನನ್ನನ್ನು SKY ಅಂತ ಕರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ವಯಸ್ಸಿನಲ್ಲಿ ಕೊಂಚ ತಡವಾಗಿ ಭಾರತ ತಂಡಕ್ಕೆ ಎಂಟ್ರಿ ಕೊಟ್ಟರೂ ಈ ಮಿಸ್ಟರ್ 360, ಕಡಿಮೆ ಸಮಯದಲ್ಲಿ ಟಿ-20ಯಲ್ಲಿ ನಂ.1 ಬ್ಯಾಟರ್ ಪಟ್ಟಕ್ಕೇರಿದರು. ಟಿ-20ಯಲ್ಲಿ ಸೂರ್ಯ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟಿ-20 ಮಾದರಿಯಲ್ಲಿ ಮೊದಲ 50 (ಇನ್ನಿಂಗ್ಸ್ಗಳಲ್ಲಿ) ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. 172 ಸ್ಟ್ರೈಟ್ ರೇಟ್ನಲ್ಲಿ SKY 1,841 ರನ್ ಕಲೆಹಾಕಿದ್ದಾರೆ.