ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರದ ಹಿನ್ನೆಲೆ ಪಾಲಿಕೆಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು.
ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿದ್ದು, ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಬಿಜೆಪಿ ಟೀಮ್ ಹೋರಾಟವನ್ನು ನಡೆಸಿದೆ. ಹುಬ್ಬಳ್ಳಿ ಪಾಲಿಕೆ ಆಯುಕ್ತರ ಕಚೇರಿ ಎದುರು ಆಹೋರಾತ್ರಿ ಧರಣಿ ಮಾಡುತ್ತಿರುವ ಹಿನ್ನೆಲೆ ಕಚೇರಿಗೆ ಬೀಗ ಹಾಕಿದ್ದರು.
ಬಳಿಕ ಪ್ರತಿಭಟನಾಕಾರರು ಕಚೇರಿಯ ಬೀಗ ಹೊಡೆಯಲು ಮುಂದಾಗಿ, ಆಯುಕ್ತ ಕಚೇರಿಗೆ ಮುತ್ತಿಗೆಯನ್ನು ಹಾಕಿದ್ದಾರೆ. ಇನ್ನೂ ಇದನ್ನು ಕಂಡ ಅಧಿಕಾರಿಗಳು ವಾಗ್ವದಕ್ಕೆ ನಿಂತಿದ್ದು, ಅಧಿಕಾರಿಗಳ ನಡೆಗೆ ಘೋಷಣೆ ಹಾಕಿ, ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಚೇರಿಯ ಬೀಗ ತೆಗೆದ ಸಿಬ್ಬಂದಿ ವಾಗ್ವಾದದ ನಡುವೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೋಲಿಸರು.
ಇದನ್ನು ಓದಿ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ದೌರ್ಜನ್ಯ
ಅಷ್ಟೇ ಅಲ್ಲ ಪೋಲಿಸರು ಬಂದರು ಕೂಡ ಕಚೇರಿಯ ಬೀಗ ತೆರೆದ ನಂತರ ಒಳಗೆ ನುಗ್ಗಿ ಭಜನೆ ಮಾಡಿ ಅಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗಿದರು. ಈ ವೇಳೆ ಪೋಲಿಸರು ಭದ್ರತೆ ನೀಡುವಲ್ಲಿ ವಿಫರಾದರು.