ಹಾಸನ : ರೈತರ ಮನೆ ಹಾಳಾದ್ರೂ ಪರವಾಗಿಲ್ಲ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳೇ ಮುಖ್ಯನಾ? ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕು. ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸರ್ಕಾರ ರೈತರ ಮನೆ ಹಾಳಾಗಲಿ, ಬೇಕಾದರೇ ಬೀದಿ ಪಾಲಾಗಲಿ ನಮಗೆ ಗ್ಯಾರಂಟಿ ಯೋಜನೆ ಈಡೇರಿಸುವುದೇ ಮುಖ್ಯ ಎನ್ನುವಂತೆ ವರ್ತಿಸುತ್ತಿದೆ ಜಿಲ್ಲೆಯ ರೈತರು ಕಷ್ಟದಲ್ಲಿದ್ದು, ನಿಮ್ಮ ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ. ಸಂಕಷ್ಟಕ್ಕೆ ಸಿಲುಕಿರೊ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಆಗ್ರಹಿಸಿದ್ದಾರೆ.
ರೈತರು ಹಾಳು ಬಿದ್ದು ಹೋಗಲಿ
1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. 75 ಸಾವಿರ ಹೆಕ್ಟೇರ್ ಜಾಗದಲ್ಲಿ ರಾಗಿ ಬೆಳೆಯಲಾಗಿದೆ. ಒಟ್ಟು ಸುಮಾರು 2 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಬಹುತೇಕ ನಾಶವಾಗಿದೆ. ಇದುವರೆಗೂ ಸರ್ಕಾರವು ಗಮನ ನೀಡಿ ಪರಿಹಾರ ನೀಡಿಲ್ಲ. ರೈತರು ಹಾಳು ಬಿದ್ದು ಹೋಗಲಿ ಎನ್ನುವ ಪರಿಸ್ಥಿತಿಗೆ ಬಂದಿದೆ ಎಂದು ಬೇಸರಿಸಿದ್ದಾರೆ.
ಜೆಡಿಎಸ್ ಮುಗಿದು ಹೋಗುತ್ತೆ
ಕೇವಲ ಗ್ಯಾರಂಟಿ ಕಡೆ ಗಮನ ಕೊಡಲಾಗಿದ್ದು, ನಾವೇನಾದ್ರೂ ಮಾತನಾಡಿದ್ರೆ ಜೆಡಿಎಸ್ ಮುಗಿದು ಹೋಗುತ್ತೆ. ಅದಕ್ಕೆ ಅವರಿವರ ಬಳಿ ಹೋಗುತ್ತಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ ಅಂತಾರೆ. ಮೊದಲು ರೈತರನ್ನು ಉಳಿಸಿ ಅವರ ಬೆಳೆಗೆ ಪರಿಹಾರ ಕೊಡಬೇಕು ಎಂದು ಹೆಚ್.ಡಿ ರೇವಣ್ಣ ಅವಲೊತ್ತುಕೊಂಡಿದ್ದಾರೆ.