Monday, December 23, 2024

ಬಾಲಿವುಡ್ ಖ್ಯಾತ ನಟ ‘ರಿಯೋ ಕಪಾಡಿಯಾ’ ಇನ್ನಿಲ್ಲ

ಬೆಂಗಳೂರು : ಚಕ್​ ದೇ ಇಂಡಿಯಾ ಖ್ಯಾತಿಯ ಬಾಲಿವುಡ್ ಹಿರಿಯ ನಟ ರಿಯೋ ಕಪಾಡಿಯಾ (66) ಇಂದು ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ರಿಯೋ ಕಪಾಡಿಯಾ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ಹಲವು ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಮೃತ ರಿಯೋ ಕಪಾಡಿಯಾ ಬಾಲಿವುಡ್​ನ ಅನೇಕ ಚಿತ್ರಗಳಲ್ಲಿ ನಟಿಸಿದ್ದು, ತಮ್ಮ ನಟನಾ ಕೌಶಲ್ಯದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಚಕ್​ ದೇ ಇಂಡಿಯಾ, ದಿಲ್​ ಚಾಹ್ತಾ ಹೈ, ಹ್ಯಾಪಿ ನ್ಯೂ ಇಯರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಶಾರುಖ್​ ಖಾನ್ ಅವರ ಚಕ್​ ದೇ ಇಂಡಿಯಾ ಸಿನಿಮಾದಲ್ಲಿ ಕಾಮೆಂಟೇಟರ್ ಆಗಿ ರಿಯೋ ಹೆಸರು ಪಡೆದಿದ್ದರು. ಮೃತ ರಿಯೋ ಪತ್ನಿ ಮರಿಯಾ ಹಾಗೂ ಮಗಳು ಫರಾ ಅವರನ್ನು ಅಗಲಿದ್ದಾರೆ. ನಾಳೆ ರಿಯೋ ಕಪಾಡಿಯಾ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES