Wednesday, January 22, 2025

ಹತ್ತೇ ಸೆಕೆಂಡಿನಲ್ಲಿ ಯುವಕನೋರ್ವ ಲಕ್ಷಾಧಿಪತಿಯಾದ ರೋಚಕ ಕಥೆ!

ಬೆಂಗಳೂರು : ಬರಿಗೈನಲ್ಲಿ ಬಂದವನಿಗೆ ಸಿಕ್ಕಿದ್ದು ಬರೋಬ್ಬರಿ 94 ಲಕ್ಷ ಹಣ ಹಿನ್ನೆಲೆ ಪೋಲಿಸರ ಬಂಧನಕ್ಕೆ ಒಳಗಾದ ಯುವಕ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಚಂದ್ರಲೇಔಟ್​ನ ನಿವಾಸಿಯಾದ ಪ್ರಮೋದ್ ಎಂಬುವವನು ಸೈಟ್ ಖರೀದಿಸಲೆಂದು ತುಂಬಾ ದಿನಗಳಿಂದ 94 ಲಕ್ಷ ಕೂಡಿಸಿ ಇಟ್ಟಿದ್ದನು. ಹಣ ರೇಡಿಯಾಗಿದ್ದರಿಂದ ಆ ಹಣವನ್ನು ಎಣಿಸಲೆಂದು, ಬ್ಯಾಗ್​ವೊಂದರಲ್ಲಿ ಹಾಗೂ ಬಾಕ್ಸ್​ನಲ್ಲಿ ಹಣವನ್ನು ಇಟ್ಟುಕೊಂಡು ಸ್ನೇಹಿತನ ಅಂಗಡಿಗೆ ಹೋಗಲು ಮುಂದಾಗಿದ್ದನು.

ಮನೆ ಕೆಳಗೆ ಬರ್ತಿದ್ದಂತೆ ಕಾರಿನ ಡೋರ್ ಓಪನ್ ಮಾಡುವ ಕಾರಣ ಕೈನಲ್ಲಿದ್ದ ಹಣವನ್ನು ಅಪರಿಚಿತ ಆ್ಯಕ್ಟಿವಾ ಬೈಕ್ ಮೇಲಿಟ್ಟಿದ್ದ ಪ್ರಮೋದ್. ಬಳಿಕ ಹಣ ಇದ್ದ ಬ್ಯಾಗ್ ಮಾತ್ರ ಕಾರಿನಲ್ಲಿ ಇಟ್ಟುಕೊಂಡು, ಹಣವಿದ್ದ ಬಾಕ್ಸ್​ನ್ನು ಬೈಕ್ ಮೇಲೆಯೇ ಬಿಟ್ಟು ಹೋಗಿರುತ್ತಾನೆ.

ಇದನ್ನು ಓದಿ : Wow.. ‘ಇಮ್ಮಡಿ ಪುಲಿಕೇಶಿ’ಯಾಗಿ ದಾಸ ದರ್ಶನ್!

ಬಳಿಕ ಬೈಕ್ ಬಳಿಗೆ ಬಂದು ನೋಡಿದ್ದ ಬೈಕ್ ಮಾಲೀಕ ವರುಣ್ ಗೌಡ. ಈ ವ್ಯಕ್ತಿ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದನು. ಆ ಬಾಕ್ಸ್​ನ್ನು ಬ್ಯಾಂಕ್​ಗೆ ಬಂದು ಏನಿದು ಎಂದು ಓಪನ್ ಮಾಡಿ ನೋಡಿದಾಗ ಕಂತೆ ಕಂತೆ ಹಣ ಕಂಡು ವರುಣ್ ಗೌಡ ಶಾಕ್ ಆಗಿದ್ದನು. ಹಣ ಸಿಕ್ಕಿದ್ದೆ ತಡ ಹಣದ ಸಮೇತ ಸ್ಥಳದಿಂದ ಎಸ್ಕೇಪ್ ಆದ  ವರುಣ್.

ಹಣವನ್ನು ತೆಗೆದುಕೊಂಡು ತನ್ನ ಶ್ರೀನಗರ ಮನೆಯಲ್ಲಿ ಇಟ್ಟುಕೊಂಡಿದ್ದನು. ಸಿಕ್ಕಿದ್ದ 94 ಲಕ್ಷ ಹಣವನ್ನು ಏನು ಮಾಡೋದು ಅನ್ನೋ ಗೊಂದಲದಲ್ಲೇ ಐದು ದಿನ ಮನೆಯಲ್ಲೇ ಕಳೆದಿದ್ದನು. ಅಷ್ಟೇ ಅಲ್ಲ ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಗು ಪ್ಲಾನ್ ಮಾಡ್ಕೊಂಡಿದ್ದ ವರುಣ್.

ಇತ್ತ ಪ್ರಮೋದ್ ಚಂದ್ರ ಲೇಔಟ್ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದನು. ಈ ದೂರಿನ ಹಿನ್ನೆಲೆ 300 ಕ್ಕೂ ಹೆಚ್ಚು ಕ್ಯಾಮರಾ ಪರಿಶೀಲಿಸಿ ಪ್ರಕರಣ ಬೇಧಿಸಿದ ಚಂದ್ರ ಲೇಔಟ್ ಪೊಲೀಸರು. ಅದೃಷ್ಟವಶಾತ್ ಬೈಕ್ ಹೊರಟ ಮಾರ್ಗ ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಕೊನೆಗೂ ಆರೋಪಿಯನ್ನು ಹಿಡಿದು 94 ಲಕ್ಷ ಹಣವನ್ನು ವಶಕ್ಕೆ ಪಡೆದ ಪೋಲಿಸರು.

ವರುಣ್ ಅದೇ ಹಣ ತಂದು ಪೊಲೀಸರಿಗೆ ಕೊಟ್ಟಿದ್ದಿದ್ರೆ ಎಲ್ಲಾ ದೃಷ್ಟಿಯಲ್ಲು ಹೀರೊ ಆಗ್ತಿದ್ದ, ಆದರೆ ಮನೆಯಲ್ಲಿ ಹಣವನ್ನು ಇಟ್ಟುಕೊಂಡು ಈಗ ಆರೋಪಿಯಾಗಿದ್ದಾನೆ.

RELATED ARTICLES

Related Articles

TRENDING ARTICLES