Monday, May 20, 2024

Wow.. ‘ಇಮ್ಮಡಿ ಪುಲಿಕೇಶಿ’ಯಾಗಿ ದಾಸ ದರ್ಶನ್!

ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾಗಿ ದೇಶಾಭಿಮಾನ ಮೆರೆದಿದ್ದು ಆಯ್ತು. ಕುರುಕ್ಷೇತ್ರದ ಧುರ್ಯೋಧನನಾಗಿ ಘರ್ಜಿಸಿದ್ದು ಆಯ್ತು. ಇದೀಗ, ಕನ್ನಡ ಚಕ್ರವರ್ತಿ, ದಕ್ಷಿಣ ಪಥೇಶ್ವರ ‘ಇಮ್ಮಡಿ ಪುಲಿಕೇಶಿ’ಯಾಗಿ ದಾಸ ದರ್ಶನ್​ ಕಂಗೊಳಿಸುತ್ತಿದ್ದಾರೆ.

ಹೌದು, ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅವರ ‘ಇಮ್ಮಡಿ ಪುಲಿಕೇಶಿ’ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಇದನ್ನ ನೋಡಿದವರು, ವಾವ್.. ದರ್ಶನ್ ಈ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಟ ದರ್ಶನ್ ಅವರು ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸ್ಯಾಂಡಲ್​ವುಡ್​ ದಾಸ ಯಾವುದೇ ಹೊಸ ಚಿತ್ರ ಮಾಡುತ್ತಿಲ್ಲ. ಇದು AI ಕಮಾಲ್. ಲೇಜಿ ಡಿಸೈನರ್ ಹೆಸರಿನ ಕಲಾವಿದ ಕೈಚಳಕದಲ್ಲಿ AI ಟೂಲ್​ನಲ್ಲಿ ಮೂಡಿರುವ ಅದ್ಭುತ ಚಿತ್ರವಿದು. ಈ ಪೋಸ್ಟರ್ ಕಂಡ ದಾಸನ ಅಭಿಮಾನಿಗಳು ಫಿದಾ ಆಗಿದ್ದಾರೆ.

ಏನಾಯ್ತು ವೀರಮದಕರಿ ಚಿತ್ರ?

ದರ್ಶನ್ ತಮ್ಮ ಸಿನಿ ಪಯಣದಲ್ಲಿ ಎಲ್ಲ ರೀತಿಯ ಸಿನಿಮಾ ಮಾಡಿದ್ದಾರೆ. ಪೌರಾಣಿಕ ಸಿನಿಮಾಗಳಿಗೆ ನಟ ದರ್ಶನ್ ಸೂಟೇಬಲ್ ಆ್ಯಕ್ಟರ್ ಅಂತನೂ ಸಾಬೀತುಪಡಿಸಿದ್ದಾರೆ. ಅದು ನಿಜವೇ ಅನ್ನೋದಕ್ಕೆ ಕುರುಕ್ಷೇತ್ರ ಚಿತ್ರವೇ ಬೆಸ್ಟ್ ಎಕ್ಸಾಂಪಲ್. ಕುರುಕ್ಷೇತ್ರ ಬಳಿಕ ಕಾಟೇರ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರಾಜ ವೀರಮದಕರಿ ನಾಯಕ ಸಿನಿಮಾವನ್ನು ಘೋಷಣೆ ಮಾಡಿದ್ದರು. ಕೋವಿಡ್​ ಕಾರಣದಿಂದ ಇದು ಸ್ವಲ್ಪ ತಡವಾಗಲಿದೆ.

ನಿರ್ಮಾಪಕರು ಮನಸ್ಸು ಮಾಡಬೇಕು

‘ಇಮ್ಮಡಿ ಪುಲಿಕೇಶಿ’ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಚಿತ್ರ ಬರುತ್ತದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ, AI ಟೂಲ್ ಬಳಸಿ ಮಾಡಿರೋ ಡಿಸೈನ್ ಮಾಡಿರುವ ದರ್ಶನ್ ಪೋಸ್ಟರ್ ಬೊಂಬಾಟ್ ಆಗಿದೆ. ದಾಸನ ಬಗೆಗೆ ಅಭಿಮಾನ ಇರುವ ಡೈರೆಕ್ಟರ್ ಅಥವಾ ನಿರ್ಮಾಪಕರು ಈ ಪೋಸ್ಟರ್ ಮೇಲೆ ಕಣ್ಣಾಯಿಸಿದ್ದೇ ಆದಲ್ಲಿ ಸಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ಗ್ಯಾರಂಟಿ. ದರ್ಶನ್ ಒಪ್ಪಿದ್ರೆ ಈ ಚಿತ್ರ ಅನೌನ್ಸ್‌ ಮಾಡಿದ್ರು ಮಾಡಬಹುದು.

RELATED ARTICLES

Related Articles

TRENDING ARTICLES