ಬೆಂಗಳೂರು : I.N.D.I.A ಮಾಡಿಕೊಂಡು ಮೂರು ಸಭೆ ಮಾಡ್ತಾರೆ, ತಮಿಳುನಾಡು ಸಿಎಂ ಸ್ಟಾಲಿನ್ನ ಕರೆಸಿಕೊಂಡು ಮಾತನಾಡಬಹುದಲ್ವಾ? ಫೈನಲ್ ಅವಾರ್ಡ್ 2018 ರಲ್ಲೇ ಬಂದಿರೋದ್ರಿಂದ ಇಲ್ಲೇ ಬಗೆಹರಿಸಿಕೊಳ್ಳಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರು ಬಿಡುವ ಆದೇಶವನ್ನು ಪಾಲಿಸಬೇಡಿ ಅಂತ ಹೇಳಿದ್ದೇವೆ. ಮಳೆ ಬರುವ ಲಕ್ಷಣಗಳು ಕಾಣ್ತಾ ಇಲ್ಲ, CWRC ಆದೇಶ ವಿರುದ್ಧ ಮತ್ತೊಂದು ಅರ್ಜಿ ಹಾಕಬೇಕು. ಪ್ರಧಾನಿ ಮೋದಿ ಅವರನ್ನು ಅವ್ರನ್ನ ಎಳೆದು ತರೋದು ಬೇಡ ಎಂದು ಹೇಳಿದರು.
ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ, ಎಲ್ಲರೂ ಅಭಿಪ್ರಾಯ ಹೇಳಿದ್ದಾರೆ. ಕಾವೇರಿ ನಿಯಂತ್ರಣ ಸಮಿತಿ 5,000 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ 21ಕ್ಕೆ ಚರ್ಚೆಗೆ ಬರಲಿದೆ. ಅದರ ಆದೇಶ ಪರಿಗಣಿಸಬೇಕೋ? ಬೇಡ್ವೋ? ಅಂತ ಚರ್ಚೆ ಆಯ್ತು. ಸರ್ಕಾರದ ತೀರ್ಮಾನಕ್ಕೆ ಬದ್ಧ ಅಂತ ತಿಳಿಸಿದ್ದೇವೆ ಎಂದರು.
CWRC ಆದೇಶಕ್ಕೆ ನಾವು ವಿರುದ್ಧ
ಕೋರ್ಟ್ ಮುಖಾಂತರ ಹೋಗಿ ನ್ಯಾಯ ಕೇಳೋದಾದ್ರೆ, ರಾಜಕಾರಣ ಬೇಡ. ನಿಯೋಗ ಹೋಗಬೇಕು ಅಂತ ಹೇಳಿದ್ದಾರೆ, ಅದಕ್ಕೆ ನಾವು ರೆಡಿ ಇದ್ದೀವಿ. ಪ್ರಸ್ತುತ ಕೋರ್ಟ್ ನಲ್ಲಿ ಕೇಸ್ ಇರೋದ್ರಿಂದ ಇಲ್ಲೇ ತೀರ್ಮಾನ ಆಗಬೇಕು. CWRC ಆದೇಶಕ್ಕೆ ನಾವು ವಿರುದ್ಧವಾಗಿದ್ದೀವಿ ಎಂದು ಪ್ರತಾಪ್ ಸಿಂಹ ತಿಳಿಸಿದರು.