Monday, December 23, 2024

ಕುಮಾರಣ್ಣನ ಆರೋಗ್ಯ ವಿಚಾರಿಸಲು ಬಂದಿದ್ದೆ : ಮೈತ್ರಿ ಗುಟ್ಟು ಬಿಟ್ಟುಕೊಡದ ಈಶ್ವರಪ್ಪ

ಬೆಂಗಳೂರು : ’10ನೇ ತಾರೀಖು ಕುಮಾರಸ್ವಾಮಿ ಕಾಲ್ ಮಾಡಿದ್ರು, ಎಲ್ಲಿ ಅಣ್ಣ ಕಾಣುಸ್ತಿಲ್ಲ ಅಂತ. ನಾನು ಅದಕ್ಕೆ ಹೇಳಿದೆ.. ಮನೆ ದೇವ್ರು ಸನ್ನಿಧಿಯಲ್ಲಿ ಹೋಮ ನಡೆಯುತ್ತಿದೆ ಅಂತ. ಕುಮಾರಣ್ಣ ಅವರು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ನಾನು ಆಸ್ಪತ್ರೆಗೆ ಆಗೋಕೆ ಆಗಿರಲಿಲ್ಲ. ಹೀಗಾಗಿ, ಅವರ ಆರೋಗ್ಯ ವಿಚಾರಿಸಲು ಆಗಿರಲಿಲ್ಲ, ಅದಕ್ಕೆ ಬಂದಿದ್ದೆ..’ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಹೆಚ್.​ಡಿ ಕುಮಾರಸ್ವಾಮಿ ಜೊತೆಗಿನ ಚರ್ಚೆ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಮಾತುಕತೆ ಸದ್ಯ ಕೇಂದ್ರ ಮಟ್ಟದಲ್ಲಿ ಇದೆ. ಅದರ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ ಎನ್ನುವ ಮೂಲಕ ಈಶ್ವರಪ್ಪ ಮೈತ್ರಿ ಗುಟ್ಟು ಬಿಟ್ಟುಕೊಡಲಿಲ್ಲ.

ಜಾತ್ಯತೀತ ಬರಿ ಅಧಿಕಾರಕ್ಕೆ ಮಾತ್ರನಾ? ಎಂದು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ ಈಶ್ವರಪ್ಪ, ಈ ಮೊದಲು ಸಹ ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬಂದಿದ್ದು ಬಿಜೆಪಿಯಿಂದ. ಹೀಗಾಗಿ, ರಾಮಕೃಷ್ಣ ಹೆಗಡೆ ಸಿಎಂ ಆದರು. ಸಿದ್ದರಾಮಯ್ಯ ಸಹ ಮೊದಲು ಗೂಟದ ಕಾರು ನೋಡಿದ್ದು ಆಗಲೇ. ಆಗ ಅವರಿಗೆ ಬಿಜೆಪಿ ಕೋಮುವಾದ ಆಗಿರಲಿಲ್ಲ ಎಂದು ಚಾಟಿ ಬೀಸಿದರು.

ಅವ್ರ ಪಕ್ಷದವರೇ ತಿರುಗಿ ಬಿದ್ದಿದ್ದಾರೆ

ಬಿಜೆಪಿಗೆ ದೇಶದ ಎಲ್ಲೆಡೆ ಬೆಂಬಲ ಸಿಗುತ್ತೆ. ರಾಜ್ಯದಲ್ಲಿ 28 ಸ್ಥಾನವನ್ನು ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಗೆಲ್ಲುತ್ತೆ. ಸಿದ್ದರಾಮಯ್ಯ ವಿರುದ್ಧ ಅವರ ಪಕ್ಷದವರೇ ತಿರುಗಿ ಬಿದ್ದಿದ್ದಾರೆ. ಬಿ.ಕೆ ಹರಿಪ್ರಸಾದ್ ಆರೋಪ ಮಾಡುತ್ತಿರುವುದು ಸುಳ್ಳಾ? ನೀವು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಆಗಿದ್ದಾಗ ಯಾಕೆ ಬಿಜೆಪಿ ಬೆಂಬಲ ಪಡೆದಿರಿ? ಕಾವೇರಿ ವಿಚಾರವಾಗಿ ಕಾಂಗ್ರೆಸ್​ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES