Sunday, December 22, 2024

ಚೈತ್ರಾ ಕುಂದಾಪುರ ಬಂಧನ : ಹಿಂದೂಪರ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಸರಿಯಲ್ಲ : ಆರಗ ಜ್ಞಾನೇಂದ್ರ

ಶಿವಮೊಗ್ಗ : ಕೋಟ್ಯಂಟತರ ರೂಪಾಯಿ ವಂಚನೆ ಆರೋಪದಲ್ಲಿ ಬಂಧನವಾಗಿರುವ ಚೈತ್ರಾ ಕುಂದಾಪುರ ವಿಚಾರವಾಗಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಚೈತ್ರಾ ಕುಂದಾಪುರ ತಪ್ಪು ಮಾಡಿದ್ರೆ ಕಾನೊನು‌ ಕ್ರಮ ಕೈಗೊಳ್ಳಲಿ. ಅನಾಗತ್ಯವಾಗಿ‌ ಹಿಂದೂಪರ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸಚಿವ ಡಿ. ಸುಧಾಕರ್ ವಿರುದ್ದ ಎಫ್​ಐಆರ್ ದಾಖಲು ವಿಚಾರವಾಗಿಮಾತನಾಡಿ, ಸಚಿವ ಸುಧಾಕರ್ ಅವರಿಗೆ ಒಂದು ಕಾನೂನು, ಬೇರೆಯವರಿಗೆ ಒಂದು ಕಾನೂನಿನಲ್ಲ. ಈ ಬಗ್ಗೆ ಡಿಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ದಲಿತರ ಮೇಲಿನ ದೌರ್ಜನ್ಯವನ್ನು ನಾನು ಕೂಡಾ ಮಾಧ್ಯಮದಲ್ಲಿ ಗಮನಿಸಿದ್ದೇನೆ. ದಲಿತರಿಗೆ ಅನ್ಯಾಯ ಆಗಬಾರದು. ಪ್ರಕರಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಸಿಎಂ ಏನು ಪ್ರತಿಕ್ರಿಯಿಸಿದ್ದಾರೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಒಳಕುದಿ ಹೊರ ಬರುತ್ತಿದೆ

ಕಾಂಗ್ರೆಸ್​ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರು ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಒಳಕುದಿ ಹೊರ ಬರುತ್ತಿದೆ. ಹರಿಪ್ರಸಾದ್ ಮುನ್ನಲೆಗೆ ಬಂದಿದ್ದಾರೆ ಅಷ್ಟೇ. ಇನ್ನು ಬಹಳಷ್ಟು ಜನ ಮಾತನಾಡುವವರು ಇದ್ದಾರೆ ಎಂದು ಆರಗ ಜ್ಞಾನೇಂದ್ರ ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES