ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕಳೆದ 10 ವರ್ಷಗಳ ಬಳಿಕ ತೀವ್ರ ಬರ ಎದುರಾಗಿದ್ದು ರಾಜ್ಯಾದ್ಯಂತ ಒಟ್ಟು 195 ತಾಲೂಕುಗಳಲ್ಲಿ ಕ್ಷಾಮ ಆವರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಘೋಷಿಸಿದ್ದಾರೆ.
ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಕಂಡು ಬಂದಿದ್ದು 34 ತಾಲೂಕುಗಳಲ್ಲಿ ಸಾಧಾರಣ ಬರ ಬಂದಿದೆ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿಯ ಬಗ್ಗೆ ಕೇಂದ್ರಕ್ಕೆ ವರದಿ ಕೊಡುತ್ತೇನೆ ಎಂದರು. ಮಳೆ ಕೊರತೆಯಿಂದ ಅನ್ನದಾತರ ಸಂಕಷ್ಟಕ್ಕೆ ಸಿಲುಕಿದ್ದು ಕಳೆದ 10 ವರ್ಷಗಳಲ್ಲೇ ಕಂಡು ಕೇಳರಿಯದ ಬರ ಉತ್ತರ, ದಕ್ಷಿಣದಲ್ಲಿ ಕ್ಷಾಮ ಉಂಟಾಗಿದೆ ಎಂದರು.
ಇದನ್ನೂ ಓದಿ: ಸಚಿವ ಡಿ.ಸುಧಾಕರ್ ವಜಾಗೆ ಮುಖ್ಯಮಂತ್ರಿ ಚಂದ್ರು ಆಗ್ರಹ
ಬರ ಸಮೀಕ್ಷೆ ನಡೆಸಿದ ಸಂಪುಟ ಉಪ ಸಮಿತಿ ತಂಡ ಜಿಲ್ಲಾವಾರು ತಾಲ್ಲೂಕುಗಳ ಸಂಖ್ಯೆಯನ್ನು ಬಿಡುಗಡೆಗೊಳಿಸಿದ್ದಾರೆ.
ಬಾಗಲಕೋಟೆ-2, ಬೆಳಗಾವಿ-8, ಬೆ.ಗ್ರಾಮೀಣ-3
ಬೆ.ನಗರ-5, ಚಿಕ್ಕಮಗಳೂರು-5, ಚಿತ್ರದುರ್ಗ-4
ಧಾರವಾಡ-3, ಗದಗ-5, ಹಾಸನ-5, ಕಲಬುರಗಿ-9
ಕೊಡಗು-2, ಕೋಲಾರ-5, ತುಮಕೂರು-5
ಉತ್ತರ ಕನ್ನಡ-9, ವಿಜಯಪುರ-10, ಯಾದಗಿರಿ-6
ದಕ್ಷಿಣ ಕನ್ನಡ-2, ಬೀದರ್-1, ಚಾಮರಾಜನಗರ-4
ದಾವಣಗೆರೆ-3, ಕಲಬುರಗಿ-5, ಕೊಪ್ಪಳ-2, ಮಂಡ್ಯ-5
ರಾಮನಗರ-2, ಉಡುಪಿ-2, ವಿಜಯನಗರದಲ್ಲಿ 4 ತಾಲೂಕುಗಳಲ್ಲಿ ಬರದ ಕ್ಷಾಮ ಎದುರಾಗಿದೆ ಎಂದು ತಿಳಿಸಿದೆ.
ಯಾವ ವರ್ಷ..? ಎಷ್ಟು ತಾಲೂಕಲ್ಲಿ ಬರ?
2016ರಲ್ಲಿ ಮುಂಗಾರಿನಲ್ಲಿ 126, ಹಿಂಗಾರಿನಲ್ಲಿ 160 ತಾಲೂಕು
2017ರಲ್ಲಿ ರಾಜ್ಯದಲ್ಲಿ ಬರ ಘೋಷಣೆ ಮಾಡಿಯೇ ಇಲ್ಲ
2018ರಲ್ಲಿ ಮುಂಗಾರಿನಲ್ಲಿ 100, ಹಿಂಗಾರಿನಲ್ಲಿ 156 ತಾಲೂಕು
2019ರಲ್ಲಿ ಹಿಂಗಾರಿನಲ್ಲಿ 49 ತಾಲೂಕುಗಳಲ್ಲಿ ಬರ ಘೋಷಣೆ
2017, 2020ರಿಂದ 2022ರಲ್ಲಿ ಬರ ಘೋಷಣೆ ಆಗಿಯೇ ಇಲ್ಲ
ಈ ಬಾರಿ 195 ತಾಲೂಕುಗಳಲ್ಲಿ ಮಳೆ ಕೊರತೆ, ಬರ ಘೋಷಣೆಯಾಗಿದೆ.