Wednesday, January 22, 2025

ಹರಿಪ್ರಸಾದ್​ರನ್ನ ದಾಳವಾಗಿ ಬಳಸುತ್ತಿರುವ ‘ಆಕಾಂಕ್ಷಿ’ ಯಾರು? : ಶಾಸಕ ಯತ್ನಾಳ್

ಬೆಂಗಳೂರು : ಬಿಜೆಪಿ ಅಸಮಾಧಾನದ ಬಗ್ಗೆ ವ್ಯಂಗ್ಯವಾಡುತ್ತಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ಮಾನ್ಯ ‘ಅಧ್ಯಕ್ಷ’ ಅವ್ರು ಸದನದಲ್ಲಿ ಕಾಂಗ್ರೆಸ್ ಪಾರ್ಟಿಯ ಶಿಸ್ತಿನ ಬಗ್ಗೆ ಪುಂಖಾನು ಪುಂಖವಾಗಿ ಹೊಡೆದಿದ್ದರು. ಡಿ.ಕೆ ಶಿವಕುಮಾರ್ ಅವರಿಗೆ ಬಿ.ಕೆ ಹರಿಪ್ರಸಾದ್ ಮಾತುಗಳು ಅವರ ಪಾರ್ಟಿಯ ಶಿಸ್ತಿನ ಚೌಕಟ್ಟಿನಲ್ಲಿರುವುದೇ?ಎಂದು ಪ್ರಶ್ನಿಸಿದ್ದಾರೆ.

ಹಿಂದುಳಿದ ನಾಯಕರಾದ ಸಿದ್ದರಾಮಯ್ಯ ಅವರ ವಿರುದ್ಧ ‘ಮುಖ್ಯಮಂತ್ರಿ ಆಕಾಂಕ್ಷಿಗಳು’ ಮಾಡುತ್ತಿರುವ ಷಡ್ಯಂತ್ರವೇ? ನೇರವಾಗಿ ಸಿದ್ದರಾಮಯ್ಯ ಅವರನ್ನು ಎದುರಿಸಲಾಗದೆ, ಹರಿಪ್ರಸಾದ್ ಅವರನ್ನು ದಾಳವಾಗಿ ಬಳಸುತ್ತಿರುವ ಆ ‘ಆಕಾಂಕ್ಷಿ’ ಯಾರು? ಎಂದು ಟ್ವೀಟ್​ ಮೂಲಕವೇ ಡಿಚ್ಚಿ ಕೊಟ್ಟಿದ್ದಾರೆ.

ಒಬ್ಬರದು ಜಾಕೆಟ್ ಹಾಕೋದು ಶೋಕಿ

ಹರಿಪ್ರಸಾದ್ ಮಜಾವಾದಿ ಅಂತ ಸಿದ್ದರಾಮಯ್ಯ ಹೆಸರು ಹೇಳಿಲ್ಲ. ಹೇಳೋದಾದ್ರೆ ಪೂರ್ತಿ ಹೇಳಬೇಕು, ಅರ್ಧಂಬರ್ಧ ಹೇಳಿದ್ರೆ ಯಾಕೆ ಹೇಳ್ಬೇಕು? ಮಜಾವಾದಿ ಅನ್ನೋದು, ಯಾರಪ್ಪ, ವಾಚ್ ಯಾವುದು ಕಟ್ಟುತ್ತಾರೆ ಅನ್ನೋದು. ಟೂಬ್ಲೆಟ್ ವಾಚ್ ರಾಡೋ, ರುಡೋ ವಾಚ್ ನಮಗೆ ಗೊತ್ತಿ. ಅವರವರ ವೈಯಕ್ತಿಕ ಶೋಕಿ ಇರುತ್ತೆ, ಅದಕ್ಕೆ ಕಟ್ಟುತ್ತಿರುತ್ತಾರೆ. ನಾವ್ಯಾಕೆ ತಕರಾರು ಮಾಡಬೇಕು, ಚಂದನ ಬಟ್ಟೆ ಹಾಕೋದು ಕೆಲವೊಬ್ಬರದು ಶೋಕಿ. ಒಬ್ಬರದು ಜಾಕೆಟ್ ಹಾಕೋದು ಶೋಕಿ. ಮತ್ತೊಬ್ಬರದು ಚೆಂಡ್(ಅನ್ಯಾಯ) ಹಾಕೋದು ಶೋಕಿ ಎಂದು ಯತ್ನಾಳ್ ಕುಟುಕಿದ್ದಾರೆ.

ಟ್ವೀಟ್ ಲಿಂಕ್ :

https://x.com/BasanagoudaBJP/status/1701518497770357015?s=20

RELATED ARTICLES

Related Articles

TRENDING ARTICLES