Thursday, January 23, 2025

ಟೊಮೋಟೊ ಬೆಲೆಯಲ್ಲಿ ಬಾರಿ ಕುಸಿತ: ತರಕಾರಿಗಳ ಬೆಲೆಯಲ್ಲೂ ಇಳಿಕೆ!

ಬೆಂಗಳೂರು: ಕಳೆದ ತಿಂಗಳಿಂದಷ್ಟೆ ಭಾರೀ ಬೇಡಿಕೆ ಇದ್ದ ಟೊಮ್ಯಾಟೊ ಬೆಲೆ ಈಗ ಕುಸಿದಿದೆ ಪತಾಳಕ್ಕೆ ಕುಸಿದಿದೆ.

ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ಗೆ ಟೊಮ್ಯಾಟೊ ಬೆಲೆ ಕೇವಲ 120 ರೂ. ಇದೇ 12ಕೆ.ಜಿ ಟೊಮ್ಯಾಟೊ ಬೆಲೆ ಕಳೆದ ಎರಡು ತಿಂಗಳ ಹಿಂದೆ 1500-2500 ರವರೆಗೆ ಮಾರಾಟವಾಗಿತ್ತು. ಆದರೆ ಇದೀಗ ಭಾರೀ ಪ್ರಮಾಣದಲ್ಲಿ ಬೆಲೆ ಇಳಿಯಾಗಿದೆ.

ಇದನ್ನೂ ಓದಿ: ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಕಾರು​ ಅಪಘಾತ!

ಕೋಲಾರ, ದಾಸನಪುರದಿಂದ ಹೆಚ್ಚಾಗಿ ಬರುತ್ತಿರುವ ಟೊಮ್ಯಾಟೊಗಳು ಕೇವಲ ಕೆ.ಜಿ 10ರೂಗೆ ಟಮೋಟೋ ಮಾರಾಟವಾಗುತ್ತಿರುವುದು ಗಿಡದ ಔಷಧಿಗೂ ಕೂಡ ದುಡ್ಡಾಗುತ್ತಿಲ್ಲ ಎಂದು ಮಾರಾಟಗಾರರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಲ್ಲದೇ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ಕುಸಿತವಾಗಿದೆ. ಇನ್ನು ಟೊಮ್ಯಾಟೊ ಜೊತೆ ತರಕಾರಿಗಳ ಬೆಲೆಯಲ್ಲಿಯೂ ಭಾರಿ ಇಳಿಕೆ ಕಂಡಿದೆ.

ಇಂದಿನ ತರಕಾರಿ ಬೆಲೆ:

ಟಮೋಟೋ -10
ಮೆಣಸಿನಕಾಯಿ- 40
ಹಿರೇಕಾಯಿ -40
ಅವರೆಕಾಯಿ-40
ಬದನೆಕಾಯಿ-30
ಮೂಲಂಗಿ-60
ಬಟಾಣಿ- 80
ಕ್ಯಾರೆಟ್ -40
ಬೀನ್ಸ್-80
ಸೌತೆಕಾಯಿ-30
ಈರುಳ್ಳಿ- 30
ಬೆಳ್ಳುಳ್ಳಿ-120

RELATED ARTICLES

Related Articles

TRENDING ARTICLES