Sunday, January 19, 2025

Milestone : 10,000* ರನ್ ಮೈಲುಗಲ್ಲು ಪೂರೈಸಿದ ರೋಹಿತ್ ಶರ್ಮಾ

ಬೆಂಗಳೂರು : ಹಿಟ್​ ಮ್ಯಾನ್, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದರು.

ಹೌದು, ಏಕದಿನ ಮಾದರಿ ಪಂದ್ಯದಲ್ಲಿ 10,000 ರನ್​ಗಳ ಮೈಲುಗಲ್ಲು ಪೂರೈಸಿದ ಬ್ಯಾಟರ್ ಎಂಬ ಶ್ರೇಯಕ್ಕೆ ಮುಂಬೈಕರ್ ರೋಹಿತ್ ಪಾತ್ರರಾದರು. ಕೊಲಂಬೊದ ಆರ್​. ಪ್ರೇಮದಾಸ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ವೇಗವಾಗಿ 10,000 ರನ್​ ಪೂರೈಸಿದವರ ಪಟ್ಟಿಯಲ್ಲಿ ಹಿಟ್​ ಮ್ಯಾನ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ನಿನ್ನೆಯಷ್ಟೇ 13,000 ರನ್​ ಪೂರೈಸಿದ ರನ್ ಮೆಷಿನ್ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ.

ಈವೆರೆಗೆ ರೋಹಿತ್ ಶರ್ಮಾ 147 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 48.91ರ ಸರಾಸರಿಯಲ್ಲಿ 10,000* ರನ್ ಚಚ್ಚಿದ್ದಾರೆ. ಇದರಲ್ಲಿ 3 ದ್ವಿಶತಕ ಸೇರಿ 30 ಶತಕ ಹಾಗೂ 51 ಅರ್ಧಶತಕಗಳು ಸೇರಿವೆ.

RELATED ARTICLES

Related Articles

TRENDING ARTICLES