Monday, December 23, 2024

ಹಸಮಣೆ ಏರಬೇಕಿದ್ದ ಲವರ್​ಗೆ ಚಟ್ಟ ಕಟ್ಟಿದ ಪಾಗಲ್ ಪ್ರೇಮಿ!

ಕಲಬುರಗಿ : ಆ ಯುವತಿಗೆ ಗಂಡು ನೋಡಿ ಮದುವೆ ಮಾಡಿ ಕೊಡಬೇಕು ಅಂತ ಆ ಕುಟುಂಬ ನಿರ್ಧರಿಸಿತ್ತು. ವಾರದ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿದ್ರು. ಆದ್ರೆ, ಎಲ್ಲಿದ್ದನೋ ಏನೊ‌ ಆ ಪಾಗಲ್ ಪ್ರೇಮಿ ಮನೆಯಿಂದ ಆ ಹುಡುಗಿಯನ್ನ ಕರೆದೊಯ್ದು ಉಸಿರನ್ನೇ ನಿಲ್ಲಿಸಿದ್ದಾನೆ. ಅಷ್ಟೇ ಅಲ್ಲ ತಾನೂ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸವಿತಾ ರಾಠೋಡ್ (35) ಮೃತಪಟ್ಟ ದುರ್ದೈವಿ. ಈಕೆ ಮೂಲತಃ ಯಾದಗಿರಿ‌ ಜಿಲ್ಲೆಯ ಮುದ್ನಾಳ್ ತಾಂಡಾದ ನಿವಾಸಿ. ಸಂಬಂಧದಲ್ಲಿ ಅಳಿಯಾ ಆಗಬೇಕಿದ್ದ ಸಚಿನ್‌ ಹತ್ಯೆಗೈದ ಆರೋಪಿ. ಸವಿತಾ ಶನಿವಾರ ಎಂದಿನಂತೆ ಮನೆ ಕೆಲಸ ಮುಗಿಸಿಕೊಂಡು ಜಮೀನಿನಲ್ಲಿ ತೊಗರಿ ಕಳೆ‌ ಕೀಳಲು ಹೋಗ್ತಿದ್ದಳು. ಈ ವೇಳೆ ಸಚಿನ್‌ಗೆ, ನನ್ನನ್ನ ಜಮೀನಿಗೆ ಬೈಕ್‌ನಲ್ಲಿ ಬಿಟ್ಟು ಬಾ ಅಂತ ಕೇಳಿದ್ದಾಳೆ. ಸರಿ ಬಾ ಬಿಡ್ತೀನಿ ಅಂತ ಬೈಕ್‌ನಲ್ಲಿ ಕರೆದುಕೊಂಡು ಹೋದ ಸಚಿನ್ ಮಾಡಿದ್ದು ಆಕೆಯ ಅತ್ಯಾಚಾರ ಹಾಗೂ ಹತ್ಯೆ!

ಕೆಲಸಕ್ಕೆ ಬಿಡ್ತೀನಿ ಅಂತ ಸವಿತಾಳನ್ನ ಕರೆದುಕೊಂಡು ಹೋಗಿದ್ದು ಬೇರೆ ಜಾಗಕ್ಕೆ. ಜಮೀನಿಗೆ ಬಿಡುವ ಬದಲು ಕಂಚಗಾರಹಳ್ಳಿ ಕ್ರಾಸ್ ಬಳಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ, ತಾನೂ ಕೂಡ ಭೀಮಾನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪೊಲೀಸ್ ಆಗುವ ಕನಸು ಕಂಡಿದ್ದ

ಇತ್ತ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಿತಾಳನ್ನು ಕಂಡ ಸ್ಥಳೀಯರು ಕಲಬುರಗಿ‌ಯ ಖಾಸಗಿ‌ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸವಿತಾ ಮೃತಪಟ್ಟಿದ್ದಾರೆ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಸಿದ್ದ ಆರೋಪಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸ್ ಆಗಬೇಕು ಅಂತ ಕನಸು ಕಂಡಿದ್ದ ಸಚಿನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಸಂಬಂಧ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದ್ದುಮುಚ್ಚಿ ಪ್ರೀತಿಸುತ್ತಿದ್ದ ಜೋಡಿ!

ಮೃತ ಸವಿತಾಗೆ ಪೋಷಕರು ಇರಲಿಲ್ಲ. ತನ್ನ ಸಹೋದರನ ಜೊತೆ ಮುದ್ನಾಳ ತಾಂಡಾದಲ್ಲಿ ವಾಸವಾಗಿದ್ದಳು. ಈಕೆಗೆ ಹತ್ತಿರದ ಸಂಬಂಧಿಯಾಗಬೇಕಿದ್ದ ಸಚಿನ್ ಪ್ರೀತಿಸುತ್ತಿದ್ದನಂತೆ. ಈಕೆಯೂ ಆತನನ್ನ ಪ್ರೀತಿ ಮಾಡ್ತಿದ್ದಳಂತೆ. ಇವರಿಬ್ಬರ ಪ್ರೀತಿ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಈ ಮಧ್ಯೆ ಸವಿತಾಳಗೆ ಸಂಬಂಧಿಕರೇ ಗಂಡು ನೋಡಿ, ಎಂಗೇಜ್ ಮೆಂಟ್ ಮಾಡಿದ್ರು. ಆದ್ರೆ, ಯಾವಾಗ ಸವಿತಾಳ ಎಂಗೇಜ್ ಮೆಂಟ್ ಆಯ್ತೋ, ಅದನ್ನ ಸಹಿಸದ ಸಚಿನ್ ಈಕೆಯನ್ನ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES