Thursday, December 19, 2024

ಜಡ್ಡು ಜಾದು..! ಸಚಿನ್, ಪಠಾಣ್ ದಾಖಲೆ ಉಡೀಸ್

ಬೆಂಗಳೂರು : ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಆಲ್​ರೌಂಡರ್ ಸರ್. ರವೀಂದ್ರ ಜಡೇಜಾ ಮತ್ತೊಂದು ದಾಖಲೆ ಬರೆದಿದ್ದಾರೆ.

ಏಷ್ಯಾಕಪ್​ನಲ್ಲಿ ಅತಿ ಹೆಚ್ಚು ಬ್ಯಾಟರ್​ಗಳನ್ನು ಪೆವಿಲಿಯನ್​​ಗೆ ಕಳುಹಿಸಿದ ಭಾರತೀಯ ಬೌಲರ್​ ಎಂಬ ಶ್ರೇಯಕ್ಕೆ ಜಡೇಜಾ ಪಾತ್ರರಾಗಿದ್ದಾರೆ. ಈ ಮೂಲಕ ಪಠಾಣ್ ಹಾಗೂ ಸಚಿನ್ ದಾಖಲೆ ಉಡೀಸ್ ಮಾಡಿದ್ದಾರೆ.

ಒಟ್ಟು 23 ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಪ್ರಥಮ ಸ್ಥಾನದಲ್ಲಿದ್ದಾರೆ. ಇರ್ಫಾನ್ ಪಠಾಣ್ 22 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 17 ವಿಕೆಟ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಇವರೇ ಹೆಚ್ಚು ವಿಕೆಟ್ ಪಡೆದವರು

ಪ್ರಸ್ತುತ ಏಷ್ಯಾಕಪ್​ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಶ್ರೀಲಂಕಾ ದಿಗ್ಗಜ ಮತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು 24 ಪಂದ್ಯಗಳಲ್ಲಿ 30 ವಿಕೆಟ್ ಪಡೆದಿದ್ದಾರೆ. ಜಡೇಜಾ ಅವರು 7 ವಿಕೆಟ್ ಪಡೆದಿದ್ದೇ ಆದಲ್ಲಿ ಮರಳೀಧರನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

RELATED ARTICLES

Related Articles

TRENDING ARTICLES