Sunday, January 19, 2025

ಭಾರತ-ಲಂಕಾ ಪಂದ್ಯಕ್ಕೆ ಮಳೆ ಅಡ್ಡಿ

ಬೆಂಗಳೂರು : ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಏಷ್ಯಾಕಪ್ ಸೂಪರ್-4 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 47 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 197 ರನ್​ ಗಳಿಸಿರುವ ಸಂದರ್ಭದಲ್ಲಿ ಮಳೆರಾಯ ಅಡ್ಡಿಪಡಿಸಿದನು. ಹೀಗಾಗಿ, ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅವರು ಮುರಿಯದ 50 ರನ್ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದರು. ಈ ವೇಳೆ ಲಂಕಾ ಯುವ ಸ್ಪಿನ್ನರ್ ದುನಿತ್ ಭಾರತಕ್ಕೆ ಮೇಲಿಂದ ಮೇಲೆ ಶಾಕ್ ನೀಡಿದರು.

93 ರನ್​ಗಳಿಗೆ ಪ್ರಮುಖ 3 ವಿಕೆಟ್

ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಪೆವಿಲಿಯನ್ ಹಾದಿ ತೋರಿದರು. ಈ ಮೂಲಕ ಭಾರತ 93 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಜೊತೆಯಾದ ಕೆ.ಎಲ್ ರಾಹುಲ್​ ಹಾಗೂ ಇಶಾನ್ ಕಿಶನ್ ಜೋಡಿ ಸ್ವಲ್ಪ ಚೇತರಿಕೆ ನೀಡಿದರೂ, ಹೆಚ್ಚು ಕಾಲ ಕ್ರೀಸ್​ ಕಚ್ಚಿ ಆಡಲಿಲ್ಲ.

ಇಶಾನ್ 33, ರಾಹುಲ್ 39 ರನ್ ಗಳಿಸಿ ಔಟಾದರು. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ 5, ರವೀಂದ್ರ ಜಡೇಜಾ 3, ಬುಮ್ರಾ 5 ರನ್​ ಗಳಿಸಿದರೆ ಕುಲ್ದೀಪ್ ಯಾದವ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಸದ್ಯ, ಅಕ್ಷರ್ ಪಟೇಲ್ ಅಜೇಯ 15 ಹಾಗೂ ಸಿರಾಜ್ ಅಜೇಯ 2 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

RELATED ARTICLES

Related Articles

TRENDING ARTICLES