Friday, October 18, 2024

ಹೀನಾಯ.. 213ಕ್ಕೆ ಭಾರತ ಆಲೌಟ್

ಬೆಂಗಳೂರು : ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಆಲೌಟ್​ ಆಗಿದ್ದು, ಸಾಧಾರಣ ಮೊತ್ತ ದಾಖಲಿಸಿದೆ. ಲಂಕಾ ಸ್ಪಿನ್ ದಾಳಿಗೆ ಭಾರತ ಅಕ್ಷರಶಃ ತತ್ತರಿಸಿತು.

ಏಷ್ಯಾಕಪ್​ನ ಸೂಪರ್-4 ಹಂತದ ಈ ಪಂದ್ಯ ಕೊಲಂಬೊದ ಆರ್​. ಪ್ರೇಮದಾಸ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.1 ಓವರ್ ಗಳಲ್ಲಿ 213 ರನ್​ ಗಳಿಸಿ ಸರ್ವಪತನಗೊಂಡಿತು. ಲಂಕಾ ಪರ ಕಮಾಲ್ ಮಾಡಿದ ಯುವ ಸ್ಪಿನ್ನರ್ ದುನಿತ್ 5 ಹಾಗೂ ಅಸಲಂಕ 4 ವಿಕೆಟ್ ಪಡೆದು ಭಾರತಕ್ಕೆ ಮುಳುವಾದರು.

ರೋಹಿತ್ ಅರ್ಧಶತಕ

ಭಾರತದ ಪರ ನಾಯಕ ರೋಹಿತ್ ಶರ್ಮಾ ಅರ್ಧಶತಕ (53) ಸಿಡಿಸಿದ್ದು ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟರ್ ಲಂಕಾ ಬೌಲರ್ ದಾಳಿ ಸಮರ್ಥವಾಗಿ ಎದುರಿಸಲಿಲ್ಲ. ಶುಭ್ಮನ್ ಗಿಲ್ 19, ವಿರಾಟ್ ಕೊಹ್ಲಿ 3, ಕೆ.ಎಲ್ ರಾಹುಲ್​ 39, ಇಶಾನ್ ಕಿಶನ್ 33, ಹಾರ್ದಿಕ್ ಪಾಂಡ್ಯ 5, ರವೀಂದ್ರ ಜಡೇಜಾ 3, ಬುಮ್ರಾ 5, ಅಕ್ಷರ್ ಪಟೇಲ್ 26, ಸಿರಾಜ್ ಅಜೇಯ 5 ರನ್​ ಗಳಿಸಿದರು.

RELATED ARTICLES

Related Articles

TRENDING ARTICLES