Monday, December 23, 2024

ಕಾಗೆಗಿರುವ ಕನಿಷ್ಠ ಬುದ್ದಿಯೂ ನಟ ಪ್ರಕಾಶ್​ ರಾಜ್​ಗಿಲ್ಲ : ಎನ್​. ರವಿಕುಮಾರ್​ !

ಬೆಂಗಳೂರು : ಕಾಗೆಗಳಿಗಿರುವ ಸಾಮಾನ್ಯ ಬುದ್ದಿಯೂ ನಟ ಪ್ರಕಾಶ್​ ರಾಜ್​ ಗೆ ಇಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಎನ್​.ರವಿಕುಮಾರ್​ ಕಿಡಿಕಾರಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ್ದಾರೆ ಕಾಗೆ ಒಳ್ಳೇ ಪಕ್ಷಿ, ಕಾಗೆಗಳಿಗೆ ಇರುವ ಸಾಮಾನ್ಯ ಬುದ್ಧಿಯೂ ಪ್ರಕಾಶ್ ರಾಜ್ ಗಿಲ್ಲ ಕಾಗೆಗೆ ಹಂಚಿಕೊಂಡು ತಿನ್ನುವ ಪಕ್ಷಿ, ಪ್ರಕಾಶ್ ರಾಜ್ ಕೆಟ್ಟದ್ದನ್ನೇ ಯೋಚನೆ ಮಾಡುವ ಪ್ರಾಣಿ, ಆ ಪ್ರಾಣಿಯ ಹೆಸರು ನಾನು ಹೇಳಲ್ಲ ಎಂದರು.

ಇದನ್ನೂ ಓದಿ: ತಮಿಳುನಾಡು ಸರ್ಕಾರಿ ಬಸ್ಸಿಗೆ ಬೆಂಗಳೂರಿನಲ್ಲಿ ಕಲ್ಲು ತೂರಾಟ!

ಎಲ್ಲ ಧರ್ಮಗಳಲ್ಲೂ ಕೆಲ ಲೋಪಗಳಿವೆ, ಮನುಷ್ಯನಲ್ಲೂ ಕೊರತೆ ಇವೆ, ಆದರೇ, ಕೆಟ್ಟದ್ದನ್ನೇ ಮಾತಾಡುವ ಪ್ರಾಣಿ ಅಂದರೆ ಅದು ಪ್ರಕಾಶ್ ರಾಜ್​ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿ.ಕೆ ಹರಿಪ್ರಸಾದ್​ ಅಸಮಧಾನ ಡಿಕೆಶಿ ಪರೋಕ್ಷ ಬೆಂಬಲ!

ಇದೇ ವೇಳೆ ಸಿದ್ದರಾಮಯ್ಯ ಮತ್ತು ಬಿ.ಕೆ ಹರಿಪ್ರಸಾದ್​ ಸಂಘರ್ಷದ ವಿಚಾರ ಪ್ರಸ್ತಾಪಿಸಿದ ಅವರು, ಹರಿಪ್ರಸಾದ್ ಸಿದ್ದರಾಮಯ್ಯ ಅವರನ್ನು ಮಜಾವಾದಿ ಅಂದಿದಾರೆ, ಹರಿಪ್ರಸಾದ್ ನಿಜವನ್ನೇ ಹೇಳಿದ್ದಾರೆ. ಇದನ್ನು ಹೇಳಿದರೆ ಏನಾಗುತ್ತೆ ಅಂತ ಗೊತ್ತಿದ್ದೇ ಹರಿಪ್ರಸಾದ್ ಮಾತಾಡಿದಾರೆ. ಸಿದ್ದರಾಮಯ್ಯ ಭ್ರಷ್ಟಾಚಾರದ ಪೋಷಕ
ಕಾಂಗ್ರೆಸ್ ನಲ್ಲಿ ಬಹಳಷ್ಟು ಶಾಸಕರು ಸಿದ್ದರಾಮಯ್ಯ ವಿರುದ್ಧ ಇದ್ದಾರೆ. ಹರಿಪ್ರಸಾದ್ ಗೆ ಬೆಂಬಲವಾಗಿ ಡಿಕೆ ಶಿವಕುಮಾರ್​ ಹಿಂದಿನಿಂದ ಸಪೋರ್ಟ್​ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES