Tuesday, December 24, 2024

ರಾಹುಲ್ ಗಾಂಧಿಗೆ ದಾರಿದ್ರ್ಯತೆ ಬಂದಿದೆ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಹಾಗೂ ಜಯರಾಮ್ ರಮೇಶ್ ಅವರಿಗೆ ದಾರಿದ್ರ್ಯತೆ ಬಂದಿದೆ. ಮಳೆ ನೀರು ಹರಿಯುವದರ ಮುಂದೆ ನಿಂತು ಟ್ವಿಟ್ ಮಾಡ್ತಾರೆ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಡೀ ಜಗತ್ತು ಭಾರತವನ್ನು ಹೊಗಳುತ್ತಿದೆ. ಆದರೆ, ಕಾಂಗ್ರೆಸ್ ನವರು ಭಾರತವನ್ನು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಇದು ಮಾನಸಿಕ ರೋಗ ಎಂದು ಛೇಡಿಸಿದರು.

G-20 ಭಾರತದ 75 ವರ್ಷದ ಇತಿಹಾಸದಲ್ಲಿ ಬಾರಿ ದೊಡ್ಡ ಮೈಲುಗಲ್ಲು. ಮುಖ್ಯವಾಗಿ ಭಿನ್ನಾಭಿಪ್ರಾಯ ಬರದಂತೆ ಡಿಕ್ಲೆರೇಷನ್ ಮಾಡಿದ್ದೇ ಬಹು ದೊಡ್ಡ ಸಾಧನೆ. ಭಾರತದದ ನೇತೃತ್ವವನ್ನು ಜಗತ್ತು ಒಪ್ಪುತ್ತಿದೆ ಇದು ಸ್ಪಷ್ಟವಾದ ಸಂಕೇತ. ದೇಶಕ್ಕೆ ಒಳ್ಳೆಯದಾದ್ರೆ ಅದನ್ನು ಸಹಿಸೋಕೆ ಆಗದ ಸ್ಥಿತಿಗೆ ಕಾಂಗ್ರೆಸ್ ನವರು ಬಂದು ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧ ಮಾಡುವ ಭರದಲ್ಲಿ ದೇಶವನ್ನೇ ವಿರೋಧ ಮಾಡ್ತಾ ಇದ್ದಾರೆ ಎಂದು ಕುಟುಕಿದರು.

ಕಾಂಗ್ರೆಸ್ಸಿಗರಿಗೆ ಸಹಿಸಲು ಆಗುತ್ತಿಲ್ಲ

ಆಫ್ರಿಕನ್ ಒಕ್ಕೂಟ ಒಗ್ಗೂಡಿಸಲು ಭಾರತಕ್ಕೆ ಪ್ರಪೋಸಲ್ ಬಂದಾಗ ಇದನ್ನು ಸ್ವೀಕಾರ ಮಾಡಿದ್ದು, ಮಧ್ಯ ಪ್ರಾಚ್ಯ ಹೊಸ ಕಾರಿಡಾರ್ ನಿರ್ಮಾಣಕ್ಕೆ ಸಹಮತದಿಂದ ಒಪ್ಪಿಗೆ ಸೂಚಿಸಿದ್ದು, ಎಲ್ಲಾ ರಾಷ್ಟ್ರದ ಪ್ರಮುಖರು, ಚೀನಾ ಮತ್ತು ರಷ್ಯಾದ ನಾಯಕರು ಸಾಕಷ್ಟು ಪ್ರಮಾಣದಲ್ಲಿ ಭಾಗಿಯಾಗಿದ್ದಾರೆ. ಭಾರತ ಎಲ್ಲಾ ಸಲಹೆಗಳನ್ನು ಮಾನ್ಯ ಮಾಡಿರೋದು ಅಚ್ಚುಕಟ್ಟಾಗಿ ನಡೆದಿರೋದನ್ನ ಸಹಿಸಲು ಆಗುತ್ತಿಲ್ಲ. ಇದು ಭಾರತವನ್ನು ಅಣಕಿಸುತ್ತಿದ್ದ ಕಾಂಗ್ರೆಸ್ ನವರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES