ಮಂಗಳೂರು : ಮಂಗಳೂರು ವಿವಿ ಗಣೇಶೋತ್ಸವ ವಿವಾದದ ಹಿನ್ನೆಲೆ ಮಂಗಳೂರು ವಿವಿ ಎ ಗ್ರೇಡ್ ಮಾಡುವ ಬಗ್ಗೆ ಮೊದಲು ಯೋಚನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗಣೇಶ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆ ವಿವಿ ಗಣೇಶೋತ್ಸವ ವಿವಾದದ ಕುರಿತು ದಿನೇಶ್ ಗುಂಡೂರಾವ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಮಂಗಳೂರು ಈಗಾಗಲೇ ವಿವಿ ಬಿ ಗ್ರೇಡ್ಗೆ ತಲುಪಿದೆ. ಅದನ್ನು ಹೇಗಾದರೂ ಅದರ ಗುಣಮಟ್ಟ ಹೆಚ್ಚಿಸಿ ಎ ಗ್ರೇಡ್ಗೆ ಬರುವಂತೆ ಮಾಡುವುದರ ಬಗ್ಗೆ ನಾವು ಮೊದಲು ಯೋಚನೆಯನ್ನು ಮಾಡಬೇಕು ಎಂದು ತಿಳಿದ್ದಾರೆ.
ಇದನ್ನು ಓದಿ : ಕೊಹ್ಲಿ 50*.. ಬದ್ದ ವೈರಿಗಳ ವಿರುದ್ಧ ವಿರಾಟ್ ‘ವಿಶ್ವರೂಪ’
ಅಷ್ಟೇ ಅಲ್ಲ ವಿವಿ ಸ್ವಾಯತ್ತ ಸಂಸ್ಥೆ ಬಗ್ಗೆ ಯಾರೂ ಹಸ್ತಕ್ಷೇಪ ಮಾಡೋದು ಸರಿಯಲ್ಲ. ಹೊರಗಿನವರು ಏನೇ ಹೇಳಿದರು ತಲೆ ಕೆಡೆಸಿಕೊಳ್ಳಲ್ಲ, ಅದರ ಬಗ್ಗೆ ವಿಸಿ ಹಾಗೂ ರಾಜ್ಯಪಾಲರು ತಿರ್ಮಾನ ಮಾಡುತ್ತಾರೆ. ಇನ್ನೂ ಪ್ರಭಾಕರ ಭಟ್ ಅವರು ಏನೂ ಮಾತನಾಡುತ್ತಾರೆ ಅನ್ನೋದು ನಮಗೆ ಬೇಕಾಗಿಲ್ಲ, ನಮಗೆ ವಿವಿಯ ಗುಣಮಟ್ಟ ಚೆನ್ನಾಗಿ ಅಭಿವೃದ್ಧಿಯಾಗಬೇಕು. ಅದರವ ಬಗ್ಗೆ ಮಾತ್ರ ಚರ್ಚೆಯಾಗಲಿ ಎಂದಿದ್ದಾರೆ.
ಅಲ್ಲಿ 40 ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಾ ಇದ್ದು, ಈಗ ಯಾಕೆ ವಿವಾದ ಮಾಡುತ್ತಾ ಇದ್ದಾರೆ ಅಂತ ಅರ್ಥ ಆಗುತ್ತಿಲ್ಲ. ವಿವಿಯ ಹಣ ಸಾರ್ವಜನಿಕರ ಹಣ, ಅದು ಶಿಕ್ಷಣಕ್ಕೆ ಮಾತ್ರ ಬಳಕೆಯಾಗಬೇಕು. ಇನ್ನೂ ಕೆಲವರಿಗೆ ಸಂಬಳ ಮತ್ತು ಪೆನ್ಶನ್ ಕೊಟ್ಟಿಲ್ಲ ಅದನ್ನು ಮೊದಲು ಸರಿ ಮಾಡಬೇಕು. ಈ ಹಬ್ಬ ಆಚರಣೆ ವಿವಿಯ ವಿವೇಚನೆಗೆ ಬಿಟ್ಟ ವಿಚಾರ, ಅದನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ಧಾರೆ.
ಈ ಬಗ್ಗೆ ಗೊಂದಲ ನಿರ್ಮಾಣ ಮಾಡುವುದು ಸರಿಯಲ್ಲ. ಚುನಾವಣೆ ಹತ್ತಿರ ಬರುತ್ತಿದೆ, ಶಾಂತಿ ಸಾಮರಸ್ಯ ಮುಖ್ಯ. ಅದು ಬಿಟ್ಟು ಅಶಾಂತಿ ಸೃಷ್ಟಿಸುವುದು ಸರಿಯಲ್ಲ. ಇದನ್ನು ಜಿಲ್ಲೆಯ ಜನತೆ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.