Thursday, January 23, 2025

Good News : ಭಾರತ-ಪಾಕ್ ಪಂದ್ಯ ಆರಂಭ

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಏಷ್ಯಾಕಪ್ ಸೂಪರ್-4 ಪಂದ್ಯ ಆರಂಭವಾಗಿದೆ. ಸ್ವಲ್ಪ ಸಮಯದ ಹಿಂದೆ ಅಂಪೈರ್​ಗಳು ಮೈದಾನದ ಪಿಚ್ ಪರಿಶೀಲಿಸಿದರು, ಬಳಿಕ ಸಂಜೆ 4.40ಕ್ಕೆ ಪಂದ್ಯ ಆರಂಭವಾಯಿತು.

ಮಳೆಯಿಂದಾಗಿ ನಿನ್ನೆ ಪಂದ್ಯ ಇಂದಿಗೆ ಕಾಯ್ದಿರಿಸಲಾಗಿತ್ತು. ಇಂದು ಮಧ್ಯಾಹ್ನ 3 ಗಂಟೆಯಿಂದಲೂ ಮಳೆ ಸುರಿದ ಕಾರಣ ಪಂದ್ಯ ಆರಂಭವಾಗಲಿಲ್ಲ. ಅಂಪೈರ್​ಗಳು ಪಿಚ್​ ಪರಿಶೀಲಿಸಿದ ಬಳಿಕ 50 ಓವರ್​ಗಳ ಸಂಪೂರ್ಣ ಪಂದ್ಯವನ್ನು ಆಡಿಸಲಾಗುವುದು ಎಂದು ಘೋಷಿಸಿದರು.

ನಿನ್ನೆ ಭಾರತ ತಂಡ 24.1 ಓವರ್​ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 147 ರನ್​ ಗಳಿಸಿಯತ್ತು. ನಾಯಕ ರೋಹಿತ್ ಶರ್ಮಾ (56) ಹಾಗೂ ಶುಭ್ಮನ್ ಗಿಲ್ (58) ಅರ್ಧಶತಕದೊಂದಿಗೆ ಉತ್ತಮ ಆರಂಭ ನೀಡಿದ್ದರು. ವಿರಾಟ್ ಕೊಹ್ಲಿ 8(16) ಹಾಗೂ ಕೆ.ಎಲ್ ರಾಹುಲ್ 17(28) ಸದ್ಯ ಬ್ಯಾಟಿಂಗ್ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES