ಬೆಂಗಳೂರು : ‘ಕೊಲಂಬೊದಲ್ಲಿ ಸೂರ್ಯನು ಪ್ರಕಾಶಮಾನವಾಗಿ ಬೆಳಗಲಿ’ ಎಂದು ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಪ್ರಾರ್ಥಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಸಚಿನ್ ಕೊಲೊಂಬೊಗೆ ತೆರಳಿದ್ದಾರೆ. ಆದರೆ, ನಿನ್ನೆ ಮಳೆಯಿಂದಾಗಿ ಪಂದ್ಯ ಮುಂದೂಡಲಾಗಿತ್ತು. ಮೀಸಲು ದಿನವಾದ ಇಂದು ಪಂದ್ಯ ಮುಂದುವರಿಯಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಕ್ರಿಕೆಟ್ ದೇವರು ಸಚಿನ್, ಇಂದು ಕೂಡ ಕೊಲಂಬೊದಲ್ಲಿ ಸೂರ್ಯನು ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಎಂದು ಹೇಳಿದ್ದಾರೆ. ಅಲ್ಲದೇ, ಮರವೊಂದರ ಕೆಳಗೆ ನಿಂತು ಆಕಾಶದ ಕಡೆ (ಸೂರ್ಯನ ಕಡೆ) ನೋಡುತ್ತಿರುವ ಫೋಟೋವನ್ನು ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ.
ಇನ್ನೂ, ಇಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿತ್ತು. ಆದರೆ, ಬೆಳಗ್ಗೆಯಿಂದ ಬಿಡದೇ ಸುರಿಯುತ್ತಿರುವ ಮಳೆ ಕಾರಣದಿಂದ ಇನ್ನೂ ಪಂದ್ಯ ಆರಂಭವಾಗಿಲ್ಲ.
Hope the sun ☀️ shines as bright in Colombo today too! #INDvPAK#AsiaCup pic.twitter.com/rdpRWveBES
— Sachin Tendulkar (@sachin_rt) September 11, 2023