Thursday, January 23, 2025

ರಾಹುಲ್ 50*.. ಪಾಕ್ ವಿರುದ್ಧ ಕನ್ನಡಿಗನ ಬೊಂಬಾಟ್ ಕಂಬ್ಯಾಕ್

ಬೆಂಗಳೂರು : ಪಾಕಿಸ್ತಾನ ಹಾಗೂ ಭಾರತ ನಡುವೆ ನಡೆಯುತ್ತಿರುವ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಬೊಂಬಾಟ್ ಆಫ್​ ಸೆಂಚುರಿ ಸಿಡಿಸಿದರು.

ನಿನ್ನೆ 17(28) ರನ್​ ಸಿಡಿಸಿದ್ದ ಕೆ.ಎಲ್ ರಾಹುಲ್ ಇಂದು ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮುಂದುವರಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡ ಕುವರ 60 ಎಸೆತಗಳಲ್ಲಿ ಒಂದು ಬೊಂಬಾಟ್ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನೊಂದಿಗೆ ಅರ್ಧಶತಕ ಬಾರಿಸಿದರು.

ಇಂಜುರಿ ಸಮಸ್ಯೆಯಿಂದ ತಂಡ ಸೇರಿಕೊಂಡ ರಾಹುಲ್ ಬದ್ಧ ವೈರಿಗಳ ವಿರುದ್ಧವೇ ಭರ್ಜರಿ ಕಂಬ್ಯಾಕ್ ಮಾಡಿದರು. ಈ ಮೂಲಕ ತಾನು ಸಂಪೂರ್ಣ ಫಿಟ್ ಆಗಿದ್ದು, ನನ್ನನ್ನು ಸುಲಭವಾಗಿ ಪರಿಗಣಿಸಬೇಡಿ ಎಂಬ ಸ್ಪಷ್ಟ ಸಂದೇಶವನ್ನು ಟೀಕಾಕಾರರಿಗೆ ರವಾನಿಸಿದ್ದಾರೆ. ರಾಹುಲ್​ ಆಗಮನದಿಂದ ಶ್ರೇಯಸ್ ಅಯ್ಯರ್ ಇಂದಿನ ಪಂದ್ಯದಿಂದ ಹೊರಗುಳಿದಿದ್ದರು.

RELATED ARTICLES

Related Articles

TRENDING ARTICLES