Monday, December 23, 2024

ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆಗೂ ತಟ್ಟಿದ ಬಂದ್‌ ಬಿಸಿ!

ಬೆಂಗಳೂರು : ಮಾಜಿ ಕ್ರಿಕೆಟಿಗ ಅನಿಲ್​ ಕುಂಬ್ಳೆಗೂ ಖಾಸಗಿ ಸಾರಿಗೆಯ ಬಂದ್​ ಬಿಸಿ ತಟ್ಟಿದೆ. ಈ ಕುರಿತ ಫೊಟೊವೊಂದನ್ನು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿದೇಶದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕುಂಬ್ಳೆ, ತಮ್ಮ ಮನೆಗೆ ಹೋಗಲು ಬಿಎಂಟಿಸಿ ಬಸ್​ ಹತ್ತಬೇಕಾಯಿತು. ಇದರೊಂದಿಗೆ ಖಾಸಗಿ ಸಾರಿಗೆಯವರ ಬೆಂಗಳೂರು ಬಂದ್​ ಬಿಸಿ ವಿಐಪಿಗಳಿಗೂ ತಟ್ಟಿದಂತಾಗಿದೆ.

ಇದನ್ನೂ ಓದಿ:ಕೊಚ್ಚಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನ ತುರ್ತು ಭೂಸ್ಪರ್ಷ!

ಬಿಎಂಟಿಸಿ ವಜ್ರಾ ಬಸ್​ ನಲ್ಲಿ ಪ್ರಯಾಣಿಸುತ್ತಿರುವ ಫೋಟೊವೊಂದನ್ನು​ ಕುಂಬ್ಳೆ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

RELATED ARTICLES

Related Articles

TRENDING ARTICLES