Saturday, January 4, 2025

🕚 JUST IN :

ಮಕ್ಕಳ ಜೊತೆ ಸೇರಿ ಮಗುವಾದ ಸಂಸದ ಬಿ.ವೈ ರಾಘವೇಂದ್ರ

ಶಿವಮೊಗ್ಗ : ಸಂಸದ ಬಿ.ವೈ ರಾಘವೇಂದ್ರ ಅವರು ದಿಢೀರನೆ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಸಮಯ ಕಳೆದರು. ಮಕ್ಕಳ ಆರೋಗ್ಯ, ಆಟ-ಪಾಠ, ಸಮಸ್ಯೆ ವಿಚಾರಿಸಿ ತಾವೂ ಮಗುವಾದರು.

ಹೊಸನಗರ ಬಳಿಯಿರುವ ಇಂದಿರಾಗಾಂಧಿ ವಸತಿ ಶಾಲೆಗೆ ರಾಘವೇಂದ್ರ ಅವರು ಭೇಟಿ ನೀಡಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ದಿಢೀರನೆ ಬಂದ ಸಂಸದರನ್ನು ಕಂಡು ಮಕ್ಕಳು ಸಂತಸಗೊಂಡರು.

ಶಾಲಾ ಮಕ್ಕಳ ಜೊತೆ ಬೆರೆತು ಸಮಸ್ಯೆ ಆಲಿಸಿದ ಅವರಿ ಎಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಮಕ್ಕಳ ಅವರ ಆರೋಗ್ಯ, ಅವರಿಗಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ಈ ವೇಳೆ ಹೊಸ ಕಟ್ಟಡದ ಅಗತ್ಯ ತುರ್ತಾಗಿರುವುದು ಮನಗಂಡ ರಾಘವೇಂದ್ರ ಅವರು ಶೀಘ್ರವಾಗಿ ನೂತನ ಕಟ್ಟಡ ನಿರ್ಮಿಸಕೊಡುವುದಾಗಿ ಮಕ್ಕಳಿಗೆ ಪ್ರಾಮಿಸ್ ಮಾಡಿದರು. ನೂತನ ಕಟ್ಟಡ, ಮಕ್ಕಳ ಜವಬ್ದಾರಿ ನನ್ನದು ಎಂದರು.

ಎಷ್ಟು ಚುರುಕಾಗಿರುವ ಮಕ್ಕಳು!

ಈ ಕುರಿತು ಟ್ವೀಟ್ ಮಾಡಿರುವ ಬಿ.ವೈ ರಾಘವೇಂದ್ರ ಅವರು, ನಾನು ತುಂಬಾ ಇಷ್ಟಪಟ್ಟು ಮಾಡುವ ಕೆಲಸ ಇದು. ದಿಢೀರನೆ ಯಾವುದೋ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಮಾತಾಡುವುದು. ಇವತ್ತು ಹೊಸನಗರ ಬಳಿಯ ಇಂದಿರಾಗಾಂಧಿ ವಸತಿ ಶಾಲೆಗೆ ಹಾಗೆಯೇ ದಿಢೀರನೆ ಹೋಗಿದ್ದೆ. ಎಷ್ಟು ಚುರುಕಾಗಿರುವ ಮಕ್ಕಳು! ಅವರ ಆರೋಗ್ಯ, ಅವರಿಗಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿಕೊಂಡೆ ಎಂದು ಹೇಳಿದ್ದಾರೆ.

ಒಂದು ಹೊಸ ಕಟ್ಟಡದ ಅಗತ್ಯ ತುರ್ತಾಗಿರುವುದು ನನ್ನ ಗಮನಕ್ಕೆ ಬಂತು. ಆದಷ್ಟು ಬೇಗ ಅದನ್ನು ಒದಗಿಸಿಕೊಡುವ ಭರವಸೆ ಕೊಟೇಟು ಬಂದಿದ್ದೇನೆ. ಇನ್ನು ಈ ಭರವಸೆ ಸದಾ ನನ್ನ ಹೆಗಲ ಮೇಲಿರುವ ಜವಾಬ್ದಾರಿ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES