Sunday, December 22, 2024

ಬೆಂಗಳೂರು ಬಂದ್​: ರಸ್ತೆಗಿಳಿದ ಕ್ಯಾಬ್​ ಡ್ರೈವರ್​ ಗೆ ಮೊಟ್ಟೆ ಏಟು!

ಬೆಂಗಳೂರು: ಖಾಸಗಿ ಸಾರಿಗೆ ಸಂಘಟನೆಗಳು ಇಂದು ಸರ್ಕಾರದ ವಿರುದ್ದ ಬಂದ್​ ಗೆ ಕರೆ ನೀಡಿದ್ದರು ರಸ್ತೆಗಿಳಿದ ಕೆಲ ಆಟೋಗಳು ಮತ್ತು ಕ್ಯಾಬ್​ಗಳ ವಿರುದ್ದ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದು ಬಂದ್​ ಗೆ ಬೆಂಬಲ ನೀಡದೇ ರಸ್ತೆಗಿಳಿದ ಕ್ಯಾಬ್​ಗಳು ಮೇಲೆ ಮೊಟ್ಟೆ ಎಸೆದಿದ್ದಾರೆ.

ನಗರದ ಹೆಬ್ಬಾಳದ ಬಳಿ ಖಾಸಗಿ ಬಂದ್​ ಬೆಂಬಲ ನೀಡದೆ ರಸ್ತೆಗಿಳಿದ ಕ್ಯಾಬ್​ಗಳಿಗೆ ಪ್ರತಿಭಟನಾ ನಿರತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಪ್ರಯಾಣಿಕರ ಪರದಾಟ!

ಇನ್ನೂ ಬೆಂಗಳೂರಿನ ಜಾಲಹಳ್ಳಿ ಬಳಿಯೂ ಬಂದ್​ ನಡುವೆ ಹಲವು ಆಟೋಗಳು ಮತ್ತು ಕ್ಯಾಬ್​ಗಳು ಸೇವೆಯಲ್ಲಿ ನಿರತರಾಗಿದ್ದು ಆಟೋ ಮತ್ತು ಕ್ಯಾಬ್​ಗಳನ್ನು ಪ್ರತಿಭಟನಾ ನಿರತ ಆಟೋ ಚಾಲಕರಿಂದ ವಾಹನಗಳ ತಡೆದು ಆಟೋ ಕಾರ್ ಗಳ ಚಾಲಕರಿಗೆ ತರಾಟೆಗೆ ತೆಗೆದುಕೊಳ್ಳಲಾಯಿತು. ಇದೇ ವೇಳೆ ಟಯರ್ ಪಂಚರ್​​ ಮಾಡಿ ಬೆಂಗಳೂರು ಸಾರಥಿ ಸೇನೆಯ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES