Monday, December 23, 2024

ಆದಿಚುಂಚನಗಿರಿ ಕ್ಷೇತ್ರ ಈಶ್ವರನ ತಪೋಭೂಮಿ : ಸಿದ್ಧರಾಮಯ್ಯ

ಮೈಸೂರು : ಜಿಲ್ಲೆಯ ಶಾಖಾಮಠದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ ರವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಆದಿಚುಂಚನಗಿರಿಯ ಮೈಸೂರು ಶಾಖಾಮಠದ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಅವರಿಗೆ ಆಹ್ವಾನ ನೀಡಿದ್ದು, ಈ ಹಿನ್ನೆಲೆ ಕಾರ್ಯಕ್ರಮದಲ್ಲಿ ಆಗಮಿಸಿ ಆದಿಚುಂಚನಗಿರಿಯ ಕ್ಷೇತ್ರವನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತನಾಡಿದರು.

ಸಿದ್ಧರಾಮಯ್ಯ ಅವರು ಭಾಷಣದಲ್ಲಿ ಆದಿಚುಂಚನಗಿರಿಯು ಇಂದು ಪ್ರಾಚೀನವಾದ ಕ್ಷೇತ್ರವಾಗಿದ್ದು, ಅದಕ್ಕೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಕ್ಷೇತ್ರಕ್ಕೆ 1800 ವರ್ಷಗಳ ಇತಿಹಾಸವಿದ್ದು, ಆದಿಚುಂಚನಗಿರಿ ಕ್ಷೇತ್ರವನ್ನು ಈಶ್ವರನ ತಪೋಭೂಮಿ ಎನ್ನುತ್ತಾರೆ.  ಅಷ್ಟೇ ಅಲ್ಲ ಆ ತಪೋಭೂಮಿಯಲ್ಲಿ ಅನೇಕ ಸಾಧುಸಂತರನ್ನು ಕಂಡಿದ್ದು, ಆದಿಚುಂಚನಗಿರಿ ಕ್ಷೇತ್ರ ಇದೀಗ ಒಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ.

ಇದನ್ನು ಓದಿ : ರಾಜ್ಯದಲ್ಲಿ 1 ವಾರ ಭಾರಿ ಮಳೆ: ಗೌರಿ ಹಬ್ಬಕ್ಕೆ ಮಳೆ ಅಡ್ಡಿ ಸಾಧ್ಯತೆ!

ಈ ಕ್ಷೇತ್ರಕ್ಕೆ ಬಾಲಗಂಗಾಧರ ನಾಥ ಸ್ವಾಮೀಜಿಯವರ ಪಾತ್ರ ತುಂಬಾ ದೊಡ್ಡದಿದೆ. ಅವರ ಶ್ರಮದಿಂದಾಗಿಯೇ ಈ ಕ್ಷೇತ್ರ ವಿಶಾಲವಾಗಿ ಬೆಳೆದಿದೆ. ಇನ್ನೂ ಮಾತನಾಡಿದ ಸಿದ್ದರಾಮಯ್ಯ ಅವರು ನಾಥ, ಪಂಥ ಎಂದರೆ ಜಾತಿ ರಹಿತ ಪಂಥ ಹಾಗೂ ಜಾತ್ಯಾತೀತ ಪಂತ ಎಂದು ಹೇಳಿದರು. ಅಷ್ಟೇ ಅಲ್ಲ ನಾವೆಲ್ಲರೂ ಮೂಲತಃ ಮನುಷ್ಯರು, ಆದರೆ ಬೆಳೆಯುತ್ತಾ ಆ ಜಾತಿ, ಈ ಜಾತಿ ಎಂದು ವಿಘಟನೆ ಮಾಡಿಕೊಂಡಿದ್ದೇವೆ ಅಷ್ಟೇ. ಇದರಿಂದ ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು ನಾಥ ಪಂಥ ಪ್ರಾರಂಭವಾಗಿದ್ದು, ಆದಿ ಚುಂಚನಗಿರಿ ಕ್ಷೇತ್ರ ಧಾರ್ಮಿಕವಾಗಿ ಜನರನ್ನು ಜಾಗೃತಿಗೊಳಿಸಲು ಬಲವನ್ನು ತುಂಬಿದೆ.

ಅಷ್ಟೇ ಅಲ್ಲ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಸಹಾ ಮಾಡಿದೆ ಎಂದು ಆದಿಚುಂಚನಗಿರಿಯ ಕ್ಷೇತ್ರದ ಬಗ್ಗೆ ಅಪಾರ ಪ್ರೀತಿಯಿಂದ ತಮ್ಮ ಭಾಷಣವನ್ನು ಮಾಡಿ ಕಾರ್ಯಕ್ರಮದಲ್ಲಿ ತುಂಬಾ ಸಂತೋಷದಿಂದ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು.

RELATED ARTICLES

Related Articles

TRENDING ARTICLES