Monday, December 23, 2024

ಗೃಹಸಚಿವರ ಸ್ವಕ್ಷೇತ್ರದಲ್ಲಿ ಜಳಪಿಸಿದ ಲಾಂಗ್ ಮಚ್ಚು

ತುಮಕೂರು : ಗೃಹಸಚಿವರ ಸ್ವಕ್ಷೇತ್ರದಲ್ಲಿ ಯುವಕರ ಮೇಲೆ ಹಲ್ಲೆಗೆ ಬಂದಿದ್ದ ಯುವಕರಲ್ಲಿ ಒಬ್ಬ ಸ್ಥಳೀಯನ ವಶಕ್ಕೆ ಪಡೆದ ಘಟನೆ ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಮದಲ್ಲಿ ನಡೆದಿದೆ.

ತೋವಿನಕೆರೆ ಮೂಲದ ಓರ್ವ ಯುವಕನ ಮೇಲೆ ಹಲ್ಲೆ ಮಾಡಲು ಯುವಕರ ಗ್ಯಾಂಗ್ ಒಂದು ಬಂದಿತ್ತು. ಈ ವೇಳೆ ಗ್ರಾಮದಲ್ಲಿ ಆರು ಮಂದಿ ಅನುಮಾನಸ್ಪದವಾಗಿ ಲಾಂಗ್ ಮಚ್ಚು ಹಿಡಿದು ಓಡಾಡುವುದನ್ನು ಕಂಡು ಅವರನ್ನು ಸ್ಥಳೀಯರು ವಿಚಾರಿಸಲು ಮುಂದಾಗಿದ್ದಾರೆ.

ಇದನ್ನು ಓದಿ : ಸನಾತನ ಧರ್ಮ ವಿವಾದ : ಉದಯನಿಧಿ ಸ್ಟಾಲಿನ್​ಗೆ ಕೋಡಿಶ್ರೀ ನೀತಿಪಾಠ

ಬಳಿಕ ಸ್ಥಳೀಯರು ಅವರು ಬಳಿ ವಿಚಾರಿಸಲು ಹೋಗುತ್ತಿದ್ದಂತೆ ಹಲ್ಲೆ ಮಾಡಲು ಬಂದಿದ್ದ, ಐವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಇನ್ನೊಬ್ಬ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದು, ಅವನನ್ನು ವಶಕ್ಕೆ ಪಡೆದಿದ್ದಾರೆ.

ಅದೃಷ್ಡವಶಾತ್ ಸ್ಥಳೀಯರ ಸಮಯಪ್ರಜ್ಕ್ಷೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

RELATED ARTICLES

Related Articles

TRENDING ARTICLES