Monday, December 23, 2024

ರಾಜವಂಶಸ್ಥೆಯನ್ನು ಬಂಧಿಸಿದ ಪೊಲೀಸರು!

ಮಧ್ಯಪ್ರದೇಶ: ಪ್ರತಿಷ್ಠಿತ ರಾಜಮನೆತನಕ್ಕೆ ಸೇರಿದ ಮಹಿಳೆಯೊಬ್ಬರನ್ನು ದೇವಸ್ಥಾನದಿಂದ ಎಳೆದು ಹೊರಗೆ ಹಾಕಿದ್ದಲ್ಲದೆ, ಅವರನ್ನು ಬಂಧಿಸಿದ ಘಟನೆ ಪನ್ನಾದಲ್ಲಿ ನಡೆದಿದೆ.

ಜನ್ಮಾಷ್ಟಮಿ ಆಚರಣೆ ವೇಳೆ ರಾಜಮನೆತನದ ಜಿತೇಶ್ವರಿ ದೇವಿ ಅವರು ಪವಿತ್ರ ಗರ್ಭಗುಡಿಯನ್ನು ಪ್ರವೇಶಿಸುವ ಮೂಲಕ ದೇವಸ್ಥಾನದ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದಡಿ ಶುಕ್ರವಾರ ಬಂಧಿಸಲಾಗಿದೆ. ಪನ್ನಾದ ಶ್ರೀ ಜುಗಲ್ ಕಿಶೋರ್ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಪ್ರತಿ ವರ್ಷವೂ ಮಧ್ಯರಾತ್ರಿ ವಿಶೇಷ ಪೂಜೆ ನಡೆಯುತ್ತದೆ.

ಇದನ್ನೂ ಓದಿ: ನಟ ಪವನ್​ ಕಲ್ಯಾಣ್​ ಅರೆಸ್ಟ್​!

ಬುಂದೇಲಖಂಡ ಪ್ರದೇಶದಲ್ಲಿ ಈ ದೇವಸ್ಥಾನವು ಜನಪ್ರಿಯ ಧಾರ್ಮಿಕ ತಾಣವಾಗಿದೆ. ದೇವಸ್ಥಾನದ ಸಿಬ್ಬಂದಿ ಪ್ರಕಾರ, ಜನ್ಮಾಷ್ಟಮಿ ಆಚರಣೆಗಳನ್ನು ಹಾಳುಮಾಡಲು ಜಿತೇಶ್ವರಿ ದೇವಿ ಪ್ರಯತ್ನಿಸಿದ್ದರು. ದೇವರಿಗೆ ತಾವೇ ಆರತಿ ಮಾಡಬೇಕು ಎಂದು ಅವರು ಪಟ್ಟುಹಿಡಿದಿದ್ದರು. ಇದರ ಬಳಿಕ ಅವರು ಪವಿತ್ರ ಗರ್ಭಗುಡಿಯನ್ನು ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದರು. ಆಗ ಮುಗ್ಗರಿಸಿ ಬಿದ್ದಿದ್ದರು. ಈ ವೇಳೆ ಉಂಟಾದ ಗದ್ದಲದ ಕಾರಣ ಪೊಲೀಸರು ಒಳಗೆ ಪ್ರವೇಶಿಸುವಂತಾಯಿತು.

ದೇವಸ್ಥಾನದ ಆವರಣದಿಂದ ಹೊರಗೆ ಹೋಗುವಂತೆ ಅವರು ಜಿತೇಶ್ವರಿ ದೇವಿ ಅವರಿಗೆ ಸೂಚಿಸಿದ್ದರು. ಜಿತೇಶ್ವರಿ ಅವರು ಮದ್ಯಪಾನ ಮಾಡಿದ್ದರು. ದೇವಸ್ಥಾನದ ಅಧಿಕಾರಿಗಳ ಜತೆ ಜಗಳವಾಡಲು ಪ್ರಯತ್ನಿಸಿದ್ದರು ಎಂದು ಸ್ಥಳದಲ್ಲಿದ್ದ ಜನರು ತಿಳಿಸಿದ್ದಾರೆ. ದೇವಸ್ಥಾನದ ಆಡಳಿತ ಸಿಬ್ಬಂದಿ ಹಾಗೂ ಪೊಲೀಸರ ಜತೆ ಅವರು ವಾಗ್ವಾದ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

RELATED ARTICLES

Related Articles

TRENDING ARTICLES