Wednesday, January 22, 2025

ಗಿಲ್-ಶರ್ಮಾ 50.. ಭಾರತ ಬೊಂಬಾಟ್ ಆರಂಭ

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಯಂಗ್ ಗನ್ ಶುಭ್ಮನ್ ಗಿಲ್ ಹಾಗೂ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧ ಶತಕ ಸಿಡಿಸಿದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸುತ್ತಿರುವ ಭಾರತ ಉತ್ತಮ ಆರಂಭ ಪಡೆದುಕೊಂಡಿದೆ. ಹಿಟ್​ಮ್ಯಾನ್ ರೋಹಿತ್ ಹಾಗೂ ಶುಭ್ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದಾರೆ.

37 ಎಸೆತಗಳಲ್ಲಿ 10 ಭರ್ಜರಿ ಬೌಂಡರಿಗಳ ನೆರವಿನಿಂದ ಬೊಂಬಾಟ್ ಅರ್ಧ ಶತಕ ಬಾರಿಸಿದರು. ಗಿಲ್​ಗೆ ಉತ್ತಮ ಸಾಥ್ ನೀಡಿದ ಮುಂಬೈಕರ್ ರೋಹಿತ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್​ನೊಂದಿಗೆ ಆಫ್​ ಸೆಂಚುರಿ (56) ಸಿಡಿಸಿ ಔಟಾದರು. ​

ಶರ್ಮಾ-ಗಿಲ್ ಅಬ್ಬರಕ್ಕೆ ಬ್ರೇಕ್

ಇನ್ನಿಂಗ್ಸ್​ನ ಮೊದಲ ಓವರ್​ನಿಂದಲೇ ಅಬ್ಬರಿಸಿದ ಭಾರತದ ಬ್ಯಾಟರ್​ಗಳಿಗೆ ಪಾಕಿಸ್ತಾನ ವೇಗಿಗಳು ಬ್ರೇಕ್ ಹಾಕಿದರು. ಆಕರ್ಷಕ ಅರ್ಧಶತಕ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದ ನಾಯಕ ರೋಹಿತ್ ಶರ್ಮಾ ಹಾಗೂ ಗಿಲ್​ಗೆ ಪಾಕ್ ಬೌಲರ್​ಗಳು ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಇದೀಗ, ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಕ್ರೀಸ್​ನಲ್ಲಿದ್ದಾರೆ.

RELATED ARTICLES

Related Articles

TRENDING ARTICLES