Friday, November 22, 2024

ಫಲಿಸದ ಪ್ರಾರ್ಥನೆ.. ಭಾರತ-ಪಾಕ್ ಪಂದ್ಯ ರದ್ದು!

ಬೆಂಗಳೂರು : ಬದ್ಧ ವೈರಿ ಪಾಕಿಸ್ತಾನ ಹಾಗೂ ಭಾರತ ಪಂದ್ಯ ಅಂದ್ರೆ ಕ್ರಿಕೆಟ್ ಪ್ರೇಮಿಗಳ ಕ್ರೇಜ್ ಬೇರೆ ಲೆವೆಲ್​ನಲ್ಲೇ ಇರುತ್ತೆ. ನಿನ್ನೆ ತಾನೆ ಶ್ರಾವಣ ಮುಗಿದದ್ದು, ಇಂದು ಭಾನುವಾರ. ಭರ್ಜರಿ ಬಾಡೂಟ ಮಿಸ್​ ಮಾಡಿದ್ರೂ ಪರವಾಗಿಲ್ಲ, ಇಂಡೋ-ಪಾಕ್ ಪಂದ್ಯ ಮಿಸ್​ ಮಾಡಬಾರದು ಅಂತ ಫ್ಯಾನ್ಸ್ ವೇಟ್​ ಮಾಡ್ತಾ ಇದ್ರು.

ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುತ್ತಾನೆ ಅಂತ ಹವಾಮಾನ ಇಲಾಖೆ ಮುನ್ಸೂಚನೆಯನ್ನೂ ನೀಡಿತ್ತು. ಇದರ ಹೊರತಾಗಿಯೂ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು ಮಳೆ ಬಾರದಿರಲಿ ಅಂತ ಮನದಲ್ಲೇ ಪ್ರಾರ್ಥಿಸಿದ್ದರು. ಆದರೆ, ಈ ಪ್ರಾರ್ಥನೆ ಫಲಿಸಲಿಲ್ಲ, ದಿಢೀರನೆ ಪ್ರೇಮದಾಸ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟ ಮಳೆರಾಯ ಫ್ಯಾನ್ಸ್​ ಆಸೆಗೆ ತಣ್ಣೀರು ಎರಚಿದ.

ಯೆಸ್, ಭಾರತ್-ಪಾಕ್ ನಡುವಣ ಏಷ್ಯಾಕಪ್ ಸೂಪರ್-4 ಪಂದ್ಯ ಮಳೆಯಿಂದ ಮುಂದೂಡಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ 24.1 ಓವರ್​ಗಳಲ್ಲಿ 2 ವಿಕೆಟ್ ಕಲೆದುಕೊಂಡು 147 ರನ್ ಗಳಿಸಿದೆ. ನಾಳೆ ಮೀಸಲು ದಿನವಾಗಿರುವುದರಿಂದ ಭಾರತ ತಂಡ ಇದೇ 24.1 ಓವರ್​ಗಳಿಂದ ಆಟ ಮುಂದುವರಿಸಲಿದೆ. ಬಳಿಕ, ಪಾಕಿಸ್ತಾನ 50 ಓವರ್​ಗಳನ್ನು ಆಡಳಿದೆ. ಒಂದು ವೇಳೆ ಮತ್ತೆ ಮಳೆ ಬಂದರೆ ಪಂದ್ಯ ರದ್ದಾಗಲಿದೆ.

ಗಿಲ್ಶರ್ಮಾ ಅದ್ಭುತ ಆರಂಭ

ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಯಂಗ್ ಗನ್ ಶುಭ್ಮನ್ ಗಿಲ್ ಹಾಗೂ ನಾಯಕ ರೋಹಿತ್ ಶರ್ಮಾ ಬೊಂಬಾಟ್ ಸ್ಟಾರ್ಟ್ ನೀಡಿದರು. ಹಿಟ್​ಮ್ಯಾನ್ ಹಾಗೂ ಗಿಲ್ ಜೋಡಿ 100 ರನ್ ಜೊತೆಯಾಟ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿತು. ಗಿಲ್ 52 ಎಸೆತಗಳಲ್ಲಿ 10 ಭರ್ಜರಿ ಬೌಂಡರಿಗಳ ನೆರವಿನಿಂದ ಅರ್ಧ ಶತಕ (58) ಪೂರೈಸಿದರು. ನಾಯಕ ರೋಹಿತ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್​ನೊಂದಿಗೆ ಆಫ್​ ಸೆಂಚುರಿ (56) ಸಿಡಿಸಿದರು. ​

RELATED ARTICLES

Related Articles

TRENDING ARTICLES