Tuesday, November 5, 2024

ದೇವೇಗೌಡ್ರು ಮತ್ತೆ ಪ್ರಧಾನಿ ಆಗಲು ಅಲ್ಲ.. ಜೆಡಿಎಸ್ ಉಳಿಸಲು ಹೋಗಿದ್ದೆ : ಗುಡುಗಿದ ದೊಡ್ಡಗೌಡ್ರು

ಬೆಂಗಳೂರು : ‘ದೇವೇಗೌಡ್ರು ದೆಹಲಿಗೆ ಹೋಗಿ ಯಾರನ್ನು ಭೇಟಿ ಮಾಡಿದ್ದು? ಹೌದು.. 40 ವರ್ಷ ಪಕ್ಷವನ್ನು ಕಟ್ಟಿದ್ದೇನೆ, ಪಕ್ಷ ಉಳಿಸಬೇಕು. ಕುಮಾರಸ್ವಾಮಿ ಬಿಜೆಪಿ ‌ಜೊತೆ ಹೋದಾಗಲೂ‌ ಉಳಿಸಿದ್ದೇನೆ. ಅವರು ಸಂಪರ್ಕ ಮಾಡಿದ್ದು ದೇವೇಗೌಡ್ರು ಮತ್ತೆ ಪ್ರಧಾನಿ ಆಗಲು‌ ಅಲ್ಲ.. ಈ ಪಕ್ಷವನ್ನು ಉಳಿಸಲು  ಹೋಗಿದ್ದೆ..!’

ಹೀಗೆ, ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಬಗ್ಗೆ ಮನಸ್ಸೋ ಇಚ್ಛೆ ನಾಲಿಗೆ ಹರಿಬಿಡುತ್ತಿರುವ ಕಾಂಗ್ರೆಸ್ಸಿಗರ ವಿರುದ್ಧ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಗುಡುಗಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಿತೀಶ್ ‌ಕುಮಾರ್ ಎಲ್ಲಿದ್ರು? ಯಾವಾಗ ಕಾಂಗ್ರೆಸ್​ಗೆ ಬಂದ್ರು? ಇವರಿಗೆ ದೇವೇಗೌಡ್ರು ಬಗ್ಗೆ ಮಾತನಾಡುವ ಯೋಗ್ಯತೆ ಇದೆಯಾ? ಎಂದು ಘರ್ಜಿಸಿದರು.

91ರಲ್ಲಿ ನಾನೇನು ಹೇಳಿ ಗಳಿಸಬೇಕಿಲ್ಲ

‘ಜೆಡಿಎಸ್ ಪಕ್ಷ ಎಲ್ಲಿದೆ? ಎಂಬ ಚರ್ಚೆ ನಡೆಯುತ್ತಿದೆ. 28 ಸ್ಥಾನದಲ್ಲಿ ‌ಕನಿಷ್ಟ‌ 24 ಸ್ಥಾನವನ್ನು ನಾವು ಗೆಲ್ಲುತ್ತೇವೆ. 4 ಸ್ಥಾನಗಳು‌ ಬಿಜೆಪಿಗೆ ಹೋಗಬಹುದು ಅಂತ ಕಾಂಗ್ರೆಸ್​ನವರು ಬೀಗಿದ್ದರು. ಈ ಪ್ರಶ್ನೆ ಕಳೆದ ಮೂರು‌ ದಿನದಿಂದ ನಡೆಯುತ್ತಿದೆ. ನಾನು ದೆಹಲಿಯಲ್ಲಿ ‌ಅನೈತಿಕವಾಗಿ ಸಂಪರ್ಕ ಮಾಡಿದ್ರು ಅಂತ ಹೇಳುತ್ತಿದ್ದಾರೆ. ನೈತಿಕತೆ ಯಾರಿಗೆ ಇದೆ, ಇಲ್ಲ ಎನ್ನುವುದನ್ನು ತುಂಬಾ ವಿಶ್ಲೇಷಣೆ ಮಾಡಬಲ್ಲೆ. ನಾನು ವ್ಯಕ್ತಿಗತ ನಿಂದನೆ ಮಾಡುವುದಿಲ್ಲ. 91ರ ವಯಸ್ಸಿನಲ್ಲಿ ನಾನೇನು ಹೇಳಿ ಗಳಿಸಬೇಕಿಲ್ಲ..’ ಎಂದು ತಿರುಗೇಟು ನೀಡಿದರು.

ನನ್ನ ತಂದೆಗೆ ನೋವು ಕೊಡಲ್ಲ ಅಂತ..!

‘ಪ್ರಧಾನಿ ನರೇಂದ್ರ ಮೋದಿ ಅವರು ದಿಶಾ ಮೀಟಿಂಗ್ ಕರೆದಿದ್ದರು. ಕುಮಾರಸ್ವಾಮಿ ಅವರನ್ನು ಕರೆದು ನೀತಿಶ್ ತರ‌ ಕೊನೆಯವರೆಗೂ ಸಿಎಂ ಮಾಡುವುದಾಗಿ ಹೇಳಿದ್ದರು. ಆಗ ರೇವಣ್ಣ ಕೂಡ ಇದ್ದರು. ಆಗ ನನ್ನ ತಂದೆಗೆ ನೋವು ಕೊಡಲ್ಲ ಅಂತ ಹೇಳಿ ಬಂದರು. ಇದನ್ನು ನಾನಿಗ ಬಹಿರಂಗವಾಗಿ ಹೇಳುತ್ತೇನೆ. ಬಹಳ‌ ಯೋಚನೆ ಮಾಡಿ ಈ ಸಭೆ ಕರೆದಿದ್ದೇನೆ. ಇಲ್ಲಿ ಬಂದಿರುವ ಶಾಸಕರೇ ಈ ಪಕ್ಷವನ್ನು ಉಳಿಸಬೇಕು. ಈ ಕಾರ್ಯಕ್ರಮಕ್ಕೆ ‌ಬಸ್​ಗೆ ದುಡ್ಡು ಕೊಟ್ಟು‌ ಕರೆ ತಂದಿಲ್ಲ. ನೀವುಗಳೇ ಸ್ವಂತ ‌ಶಕ್ತಿಯಿಂದ‌ ವಾಹನ ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದೀರಿ’ ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದರು.

RELATED ARTICLES

Related Articles

TRENDING ARTICLES