Friday, December 27, 2024

ಅಲ್ಲಾಹು ಮಳೆ ಕಳುಹಿಸಿ, ನಮ್ಮನ್ನು ರಕ್ಷಿಸಿದ : ಶೋಯೆಬ್ ಅಖ್ತರ್

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿರುವ ಬಗ್ಗೆ ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವಿಟ್ಟರ್​ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿರುವ ಅವರು, ‘ಅಲ್ಲಾಹು ಮಳೆಯನ್ನು ಕಳುಹಿಸಿ ನಮ್ಮನ್ನು ಕಾಪಾಡಿದನು. ಅಲ್ಲಾಹನಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

‘ನಾನು ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಬಂದಿದ್ದೇನೆ. ಸಾಕಷ್ಟು ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಅಲ್ಲಾಹು ಮಳೆಯನ್ನು ಕರುಣಿಸುವ ಮೂಲಕ ನಮ್ಮನ್ನು ಕಾಪಾಡಿದ್ದಾನೆ. ಮಳೆ ನಿಂತು ಪಂದ್ಯ ಮತ್ತೆ ಆರಂಭವಾಗುತ್ತದೆ ಅಂತ ನನಗೆ ಅನಿಸುತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮೊದಲು, ‘ನಾನು ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಹೊರಟೆ. ಪಾಕಿಸ್ತಾನ ತಂಡ ಟಾಸ್​ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಹ್ಮ್.. ಹ್ಮ್.. ಇದು ಒಳ್ಳೆಯ ನಿರ್ಧಾರ ಎಂದು ನೀವು ಭಾವಿಸುತ್ತೀರಾ?’ ಎಂದು ಪೋಸ್ಟ್ ಮಾಡಿದ್ದರು.

RELATED ARTICLES

Related Articles

TRENDING ARTICLES