Wednesday, January 22, 2025

35 ವರ್ಷದ ಮಹಿಳೆಯ ಜೊತೆ ಸಪ್ತಪದಿ ತುಳಿದ 75ರ ವೃದ್ಧ!

ಚಿಕ್ಕಬಳ್ಳಾಪುರ : 75 ವರ್ಷದ ವ್ಯಕ್ತಿ 35 ವರ್ಷದ ಮಹಿಳೆಯನ್ನು ಮದುವೆಯಾಗಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ನಟ ಪವನ್​ ಕಲ್ಯಾಣ್​ ಅರೆಸ್ಟ್​!

ಮೇಲೂರು ಗ್ರಾಮದ ಈರಣ್ಣ ಎಂಬುವರು ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದ ಮಹಾರಾಷ್ಟ್ರ ಮೂಲದ 35 ವರ್ಷದ ಅನುಶ್ರೀಯನ್ನ ಮದುವೆಯಾಗಿದ್ದಾರೆ. ಇಬ್ಬರಿಗೂ ಈ ಹಿಂದೆ ಮದುವೆಯಾಗಿ ಮಕ್ಕಳು ಕೂಡ ಇದ್ದರು. ಈರಣ್ಣ ಸ್ಥಿತಿವಂತನಾಗಿದ್ದರೂ ಕೂಡ ಈತನನ್ನು ನೋಡಿಕೊಳ್ಳುವುದಕ್ಕೆ ಯಾರು ಮುಂದಾಗಿರಲಿಲ್ಲ. ಮಗ ಹಾಗೂ ಮಗಳು ಇದ್ದರೂ ಕೂಡ ಈರಣ್ಣನನ್ನು ಯಾರು ನೋಡಿಕೊಳ್ಳುತ್ತಿರಲಿಲ್ಲ. ಇದರಿಂದಾಗಿ ಆಶ್ರಯಕ್ಕಾಗಿ ಮತ್ತೊಂದು ಮದುವೆಯಾಗುವ ಅನಿವಾರ್ಯ ಬಂತು ಅಂತಾರೆ ಈರಣ್ಣ.

ಇನ್ನೂ ಇವರಿಬ್ಬರ ಈ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

RELATED ARTICLES

Related Articles

TRENDING ARTICLES