Friday, January 24, 2025

ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಓಡಿದ ವಿದೇಶಿ ಮಹಿಳೆಯರು!

ಬೆಂಗಳೂರು: ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ವಿದೇಶಿ ಮಹಿಳೆಯರು ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಪರಾರಿಯಾಗಿರುವ ಘಟನೆ ಎಂಜಿ ರಸ್ತೆಯಲ್ಲಿ ನಡೆದಿದೆ.

ಶನಿವಾರ ರಾತ್ರಿ ಬಿಗ್ರೇಡ್​ ರೋಡ್​ ಮತ್ತು ಎಂ ಜಿ ರಸ್ತೆಯಲ್ಲಿ ನೈಟ್​ ಡೌಂಡ್ಸ್ ನಲ್ಲಿದ್ದ ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಟಿ.ಹೆಚ್. ಬರುತ್ತಿದ್ದಂತೆ ವೀಕೆಂಡ್​ ಮೋಜಿನಲ್ಲಿದ್ದ ವಿದೇಶಿ ಮಹಿಳೆಯರು ಪಾರಾರಿಯಾಗಿದ್ದಾರೆ.

ಇದನ್ನೂಓದಿ: ನಟ ಪವನ್​ ಕಲ್ಯಾಣ್​ ಅರೆಸ್ಟ್​!

ವಾರಾಂತ್ಯದಲ್ಲಿ ವಿದೇಶಿ ಮಹಿಳೆಯ ಹಾವಳಿ ಹೆಚ್ಚಾಗಿದ್ದು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಬ್ರಿಗೇಡ್ ರೋಡ್​ ಮತ್ತು ಎಂಜಿ ರಸ್ತೆಯಲ್ಲಿ ಕೇಂದ್ರ ವಿಭಾಗದ ಡಿಸಿಪಿ ಶೇಖರ್​ ಟಿ.ಹೆಚ್​ ಅವರು ಬರುತ್ತಿದ್ದಂತೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರು ದಿಕ್ಕಾಪಾಲಾಗಿ ಓಟಕಿತ್ತಿದ್ದಾರೆ.

ಈ ಹಿಂದೆಯೂ ಅಕ್ರಮ ಚಟುವಟಿಕೆ ದೂರುಗಳು ಬಂದ ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಹಲವರನ್ನ ವಶಕ್ಕೆ ಪಡೆದಿದ್ದರು. ಆದರೂ, ಪದೇ ಪದೇ ವಿದೇಶಿಗರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.

RELATED ARTICLES

Related Articles

TRENDING ARTICLES