Friday, May 17, 2024

ಮೊರಾಕ್ಕೋದಲ್ಲಿ ಪ್ರಭಲ ಭೂಕಂಪನ: 265 ಕ್ಕೂ ಹೆಚ್ಚು ಸಾವು!

ಮೊರಾಕ್ಕೊ: ಶುಕ್ರವಾರ ರಾತ್ರಿ ಮೊರಾಕ್ಕೋದಲ್ಲಿ 6.8 ರಷ್ಟು ತೀವ್ರತೆಯ ಪ್ರಭಲ ಭೂಕಂಪವಾಗಿದ್ದು ಇದರಲ್ಲಿ 296 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು ಅನೇಕರು ಗಾಂಭೀರ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಈ ಘಟನೆಯಲ್ಲಿ 150ಕ್ಕು ಹೆಚ್ಚು ಗಾಯಾಳುಗಳನ್ನು ಹೆಚ್ಚಿನ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊರಾಕ್ಕೂ ಸಿಟಿ ಸುತ್ತಾಮುತ್ತಾ ಘಟನೆಯಲ್ಲಿ ನೂರಾರು ಮನೆಗಳು ನೆಲಸಮವಾಗಿದೆ. ಮನೆಗಳು, ಕಟ್ಟಡಗಳು, ಅವಶೇಷಗಳಡಿಯಲ್ಲಿ ಹಲವರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: ಇಂದು ಮತ್ತು ನಾಳೆ 18ನೇ ಜಿ20 ಶೃಂಗಸಭೆ!

ಈ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದು, ಮೊರಾಕ್ಕೋದಲ್ಲಿ ಸಂಭವಿಸಿದ ಭೂಕಂಪನದಿಂದ ಅಪಾರ ಪ್ರಮಾಣದ ಪ್ರಾಣಹಾನಿಯಾಗಿರುವುದು ನನಗೆ ತೀವ್ರ ನೋವನ್ನುಂಟು ಮಾಡಿದೆ. ಭೂಕಂಪನದಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದಿಕೊಂಡವರಿ ನನ್ನ ಸಹಾನೂಭೂತಿಗಳು, ಗಾಯಾಳುಗಳು ಆದಷ್ಟು ಭೇಗ ಚೇತರಿಸಿಕೊಳ್ಳಲಿ, ಈ ಸಂದರ್ಭದಲ್ಲಿ ಮೊರಾಕ್ಕೋಗೇ ಅಗತ್ಯವಿರುವ ಎಲ್ಲಾ ಸೇವೇಗಳನ್ನು ಒದಗಿಸಲು ನಾವು ಸಿದ್ದವಿದ್ದೇವೆ ಎಂದು ತಿಳಿಸಿದ್ದಾರೆ.

 

RELATED ARTICLES

Related Articles

TRENDING ARTICLES