Monday, December 23, 2024

ಸತ್ತವರ ಹೆಸರಲ್ಲಿ ರೇಷನ್​ ಪಡೆಯುತ್ತಿದ್ದವರ ಖಾತೆಗೆ ಹಣ ವರ್ಗಾವಣೆ ಸ್ಥಗಿತ!

ಬೆಂಗಳೂರು: ಸತ್ತವರ ಹೆಸರಿನಲ್ಲಿ ಪಡಿತರ ಹಾಗೂ DBT ಮೂಲಕ ಹಣ ಪಡೆಯುತ್ತಿದ್ದ 5.18 ಲಕ್ಷಕ್ಕೂ ಹೆಚ್ಚು ಅನರ್ಹರನ್ನ ಪತ್ತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆಗ್ತಿದ್ದ ಕೋಟ್ಯಂತರ ರೂಪಾಯಿ ನಷ್ಟವನ್ನ ತಡೆಯಲಾಗಿದೆ.

ಇದನ್ನೂ ಓದಿ: ಯೂಟರ್ನ್​ ವೇಳೆ ಶಾಲಾ ವಾಹನ ಪಲ್ಟಿ: ಮಕ್ಕಳಿಗೆ ಗಾಯ!

ಸತ್ತವರ ಹೆಸರಿಗೂ ಪಡಿತರ ವಿತರಣೆ ನಡೆಯುತ್ತಿರೋ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆ ಆಹಾರ ಇಲಾಖೆ ಜುಲೈನಿಂದ ಆಗಸ್ಟ್‌ವರೆಗೆ ಲಕ್ಷಾಂತರ ಪಡಿತರದಾರರ ಹೆಸರನ್ನ ಡಿಲೀಟ್ ಮಾಡೋ ಕಾರ್ಯಕ್ಕೆ ಮುಂದಾಗಿದೆ. ಸತ್ತವರ ಹೆಸರನ್ನು ಡಿಲೀಟ್ ಮಾಡಿಸಬೇಕೆಂದು ಸರ್ಕಾರ ಅರಿವು ಮೂಡಿಸಿದ್ದರೂ ಜನ ಕೇರ್‌ ಮಾಡದೇ ಸತ್ತವರ ಹೆಸರಿನಲ್ಲಿ ಪಡಿತರ ಪಡೆಯುತ್ತಿದ್ದರು.

ಹೀಗಾಗಿ ಮೃತರ ವಿವರಗಳನ್ನ ಜನನ ಮರಣ ನೋಂದಣಿ ಇಲಾಖೆಯ ಇ-ಜನ್ಮ ವಿಭಾಗದಿಂದ ಆಧಾರ್‌ ಮಾಹಿತಿ ಮೇರೆಗೆ ಸತ್ತವರ ಹೆಸರನ್ನ ಪತ್ತೆ ಮಾಡಿ ಡಿಲೀಟ್ ಮಾಡಲಾಗಿದೆ. 6-7 ತಿಂಗಳ ಹಿಂದೆ ಮತ್ತೆ ಕೆಲವರು ವರ್ಷದ ಹಿಂದೆ ನಿಧನರಾದವರು ಕೂಡ ಇದ್ದರು. ಇವರು ಈವರೆಗೆ ಪಡಿತರ ಪಡೆದಿದ್ದರೂ ಯಾವುದೇ ಕ್ರಮ ಸಾಧ್ಯವಾಗಿರಲಿಲ್ಲ. ಆದರೇ, ಅವರ ಹೆಸರಿನಲ್ಲಿ ನೀಡುತ್ತಿದ್ದ 5 ಕೆಜಿ ಅಕ್ಕಿ ಮತ್ತು ಕಳೆದ ತಿಂಗಳಿನಿಂದ ಹೆಚ್ಚುವರಿ 5 ಕೆಜಿ ಅಕ್ಕಿಗೆ ನೀಡುತ್ತಿದ್ದ ನೇರ ನಗದು ವರ್ಗಾವಣೆ ಹಣ ಸ್ಥಗಿತಗೊಳಿಸಲಾಗಿದೆ. ಇದರಿಂದ 8 ಕೋಟಿ ನಷ್ಟ ತಡೆದಂತಾಗಿದೆ.

RELATED ARTICLES

Related Articles

TRENDING ARTICLES