Monday, July 1, 2024

ಈ ಭ್ರಷ್ಟ ಸರ್ಕಾರ ಜನ ಹಿತ ಮರೆತಿದೆ : ಯಡಿಯೂರಪ್ಪ

ಬೆಂಗಳೂರು : ಭ್ರಷ್ಟ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹೋರಾಟ ಮಾಡೋದು ಪ್ರಾರಂಭ ಆಗಿದೆ. ಸೆ.16 ರಿಂದ ರಾಜ್ಯದ ಪ್ರತೀ ತಾಲೂಕು, ಜಿಲ್ಲೆಯಲ್ಲಿ ಹೋರಾಟ ನಡೆಯಲಿದೆ. ನಾವು ಆಯ್ಕೆ ಮಾಡಿರುವ ಈ ಸ್ಥಳ ಸರಿಯಿಲ್ಲ, ಜಾಗ ಇದ್ದಿದಿದ್ರೆ 10 ರಿಂದ 15 ಸಾವಿರ ಜನ ಸೇರುತ್ತಿದ್ರು ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಗುಡುಗಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರದ ರೈತ ವಿರೋಧಿ, ಜನ ವಿರೋಧಿ ನೀತಿ ಖಂಡಿಸಿ ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದೆಲ್ಲೆಡೆ ಅತೀವ ಮಳೆ ಕೊರತೆ, ದನ ಕರುಗಳಿಗೆ ಮೇವಿಲ್ಲ, ಜನರಿಗೆ ಕುಡಿಯೋಕೆ ನೀರು ಸಿಗ್ತಾ ಇಲ್ಲ. ಬರ, ಕಾವೇರಿ ಪ್ರಾಧಿಕಾರಕ್ಕೆ ತಿಳಿಸೋದ್ರಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಮಳೆ ಇಲ್ಲದೇ 190 ತಾಲೂಕುಗಳಲ್ಲಿ ಬರ ಇದೆ. ಆದರೂ, ಕಾಂಗ್ರೆಸ್ ಸರ್ಕಾರ ಬರ ಘೋಷಿಸಲು ಮೀನಾಮೇಷ ಎಣಿಸುತ್ತಿದೆ, ಇದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.

ಹೋರಾಟ ಕಂಟಿನ್ಯೂ ಮಾಡ್ತೀವಿ

ವಿದ್ಯುತ್ ಬಿಲ್ 4,000 ಬರ್ತಿದೆ, ಏಕಾಏಕಿ‌ ಕರೆಂಟ್ ಬಿಲ್ ಜಾಸ್ತಿ ಮಾಡಿದ್ದಾರೆ. ಜನರ ಜೀವನ ಜೊತೆ ಚೆಲ್ಲಾಟ ಆಡ್ತಿದ್ದಾರೆ. ರಾಜ್ಯದ ಉದ್ದಗಲದಲ್ಲಿ ಹೋರಾಟ ಮಾಡ್ತೀವಿ. ಸಾವಿರಾರು ಸಂಖ್ಯೆಯಲ್ಲಿ ಜನ ಬಂದು ಮೆರವಣಿಗೆಯಲ್ಲಿ ಕಳಿಸಿಕೊಡಬೇಕು. ಈ ಭ್ರಷ್ಟ ಸರ್ಕಾರ ಜನ ಹಿತ ಮರೆತಿದೆ. ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

RELATED ARTICLES

Related Articles

TRENDING ARTICLES