Saturday, September 21, 2024

ಜನರಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆ

ದಾವಣಗೆರೆ : ಜಿಲ್ಲೆಯ ಗಡಿಭಾಗದಲ್ಲಿ ಕಾಟಕೊಡುತ್ತಿದ್ದ ಚಿರತೆಯೊಂದನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಘಟನೆ ನ್ಯಾಮತಿ ತಾಲೂಕಿನ ಗುಡ್ಡದಂಚಿನ ಗ್ರಾಮದ ಬಳಿ ನಡೆದಿದೆ.

ವಾರದ ಹಿಂದೆ ಕುಂಕುವ ಗ್ರಾಮದಲ್ಲಿ ನಾಯಿ ಮತ್ತು ಕುರಿಯನ್ನು ಎಳೆದೊಯ್ದು ತಿಂದಿದ್ದ ಚಿರತೆ. ಈ ಹಿನ್ನೆಲೆ ಆತಂಕಗೊಂಡ ಜನರು ಮನೆಯಿಂದ ಹೊರಬರಲು ಹೆದರುತ್ತಿರುವ ಆರೇಳು ಗ್ರಾಮದ ಜನರುಗಳು.

ಈ ಪರಿಣಾಮ ಘಟನೆಯನ್ನು ತೀವ್ರತೆ ಗಂಭೀರವಾಗಿ ಪರಿಗಣಿಸಿದ್ದು, ನಾಲ್ಕೈದು ಗ್ರಾಮಗಳಲ್ಲಿ ಬೋನು ಅಳವಡಿಸಿದ್ದರು. ಬಳಿಕ ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಸೆರೆಗೆ ಬಿದ್ದಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವ ಗಡಿಭಾಗದ ಜನರು.

ಇದನ್ನು ಒದಿ : ಬಿಜೆಪಿ-ಜೆಡಿಎಸ್ ಮೈತ್ರಿಗೆ ‘ಆಲ್ ದಿ ಬೆಸ್ಟ್’ ಎಂದ ಡಿಕೆಶಿ

ಸೆರೆ ಹಿಡಿದ ಚಿರತೆಯನ್ನು ತಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ.

RELATED ARTICLES

Related Articles

TRENDING ARTICLES